ಕಳಸ ಲೈವ್ ವರದಿ
ಹೆಸರಾಂತ ನಾಟಿ ವೈದ್ಯ ಗುತ್ಯಡ್ಕ ನಾಗಪ್ಪ ಗೌಡರನ್ನು ಸಂಸೆ ಶೌರ್ಯ ಘಟಕದ ವತಿಯಿಂದ ಗುರುತಿಸಿ ಗೌರವಿಸಲಾಯಿತು.
ಸಂಸೆ ಗ್ರಾಮದ ಗುತ್ಯಡ್ಕ ನಿವಾಸಿ ನಾಟಿ ವೈದ್ಯರಾದ ನಾಗಪ್ಪ ಗೌಡ ಇವರು ನಿರಂತರ ತಮ್ಮ ನಾಟಿ ಗಿಡಮೂಲಿಕೆ ಔಷಧಿಗಳ ಮೂಲಕ ಜನ ಸಾಮಾನ್ಯರ ನಾನಾ ಖಾಯಿಲೆಗಳಾದ ಸರ್ಪಸುತ್ತು, ಜಾಂಡೀಸ್ ಬಾವು ಏಳುವುದು. ಚರ್ಮರೋಗ ಮುಂತಾದ ಖಾಯಿಲೆಗಳಿಗೆ
ಔಷಧಿಯನ್ನು ನೀಡಿ ಗುಣಪಡಿಸಿಕೊಂಡು ಬಂದಿದ್ದಾರೆ, ಹಾವು ಕಡಿತಕ್ಕೆ ಒಳಗಾದ ನೂರಾರು ಜನರಿಗೆ ಸಕಾಲದಲ್ಲಿ ನಾಟಿ ಔಷಧಿಯನ್ನು ನೀಡಿ ಅವರ ಪ್ರಾಣವನ್ನು ಕಾಪಾಡಿದ್ದಾರೆ. ಅಲ್ಲದೇ
ಜಾನುವಾರುಗಳ ವಿವಿಧ ಕಾಯಿಲೆಗಳಿಗೆ ಔಷಧಿಯನ್ನು ನೀಡಿ ಸಾವಿರಾರು ಜಾನುವಾರುಗಳ ಪ್ರಾಣದಾತರಾಗಿದ್ದಾರೆ
ಇಂತಹ ಅಪರೂಪದ ನಾಟಿ ವೈದ್ಯರನ್ನು ಸಂಸೆ ಶೌರ್ಯ ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭ ದಲ್ಲಿ ಕಳಸ ತಾಲ್ಲೂಕಿನ ಯೋಜನಾಧಿಕಾರಿ ಸುರೇಶ್, ಕಳಸ ತಾಲ್ಲೂಕು ಶೌರ್ಯ ವಿಪತ್ತು ಘಟಕದ ಮಾಸ್ಟರ್ ಬಿ.ಕೆ ಮಹೇಶ್, ಕಳಸ ತಾಲ್ಲೂಕು ನೋಡೆಲ್ ಅಧಿಕಾರಿ ಅರವಿಂದ್, ಕಳಸ ವಲಯ ಮೇಲ್ವಿಚಾರಕರಾದ ಹರೀಶ್, ಶೌರ್ಯ ತಂಡದ ಸದಸ್ಯರು ಉಪಸ್ಥಿತರಿದ್ದರು.
