


ಕಳಸ ಲೈವ್ ವರದಿ
ಕಳಸ ಕಳಶೇಶ್ವರ ನಗರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ಪೂಜೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಪುಟ್ಟ ಗ್ರಾಮದಲ್ಲಿ ಕೆಲವೇ ಮಕ್ಕಳಿರುವ ಅತ್ಯಂತ ಅಚ್ಚು ಕಟ್ಟಾಗಿ ಮತ್ತು ಅಭಿವೃದ್ಧಿಯನ್ನು ಕಾಣುತ್ತಿರುವ ಉತ್ತಮ ಶಿಕ್ಷಕರ ವೃಂದ ಇರುವ ಕಲಶೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಶಿಸ್ತು ಬದ್ದವಾದ ಸರಸ್ವತಿ ಪೂಜೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಊರಿನ ಗ್ರಾಮಸ್ಥರ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಭಾಸ್ಕರ ಹಾಗೂ ಅಂಗನವಾಡಿ ಕಾರ್ಯಕರ್ತೆ ಇಂದಿರಾ ಪ್ರಭು ಅವರನ್ನು ಗೌರವಿಸಲಾಯಿತು.ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.ಹಾಗೂ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಅಜಿತ್ ಪ್ರಸಾದ್ ಮಾತನಾಡಿ ಸರ್ಕಾರಿ ಶಾಲೆಯೆಂಬ ಅಸಡ್ಡೆಯನ್ನು ತೋರಿಸದೆ ನಮ್ಮ ಮಕ್ಕಳನ್ನು ನಮ್ಮ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಸೇರಿಸಿ ಆ ಶಾಲೆಯನ್ನು ಉಳಿಸಿ ಬೆಳೆಸುವಂತ ಹೊಣೆಗಾರಿಗೆ ಆ ಗ್ರಾಮದ ಗ್ರಾಮಸ್ಥರಿಗೆ ಇರಬೇಕು.ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದಂತೆ ಹೆಚ್ಚಿನ ಶಿಕ್ಷಕರು, ಹೆಚ್ಚಿನ ಸೌಲಭ್ಯ ಮತ್ತು ಗುಣ ಮಟ್ಟದ ಸೌಲಭ್ಯಗಳು ಸಿಗಲು ಕಾರಣ ವಾಗುತ್ತದೆ.ಇದರಿಂದ ಶಾಲೆಯ ಅಭಿವೃದ್ಧಿಯೂ ಆಗುತ್ತದೆ ಸರ್ಕಾರಿ ಶಾಲೆ ಉಳಿಯುತ್ತದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಭಾಸ್ಕರ ಮಾತನಾಡಿ ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಆ ನಿಟ್ಟಿನಲ್ಲಿ ಈ ಹಿಂದಿನಿಂದಲೂ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರ ಖಾಲಾಜಿಯಿಂದ ಈ ಶಾಲೆ ಅಚ್ಚು ಕಟ್ಟಾಗಿ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅನ್ನಪೂರ್ಣ, ಮುಖ್ಯ ಶಿಕ್ಷಕಿ ರೇವತಿ, ಊರಿನ ಮುಖಂಡರಾದ ಸುರೇಂದ್ರ ಬಿ.ಎಂ, ವಿನಾಯಕ, ಶರೀಫ್,ಮಹೇಶ್, ಮಧು, ರಾಮಣ್ಣ ಹಾಗೂ ಸಹ ಶಿಕ್ಷಕರು, ಪೋಷಕರು, ಗ್ರಾಮಸ್ಥರು ಮಕ್ಕಳು ಇದ್ದರು.
ಸಭಾ ಕಾರ್ಯಕ್ರಮ ನಂತರದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.



