ಕಳಸ ಲೈವ್ ವರದಿ
ಬಾಳೆಹೊಳೆ ಶ್ರೀ ಚನ್ನಕೇಶವ ಸ್ವಾಮಿ ಮತ್ತು ಪರಿವಾರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶ ಮತ್ತು ರಥೋತ್ಸವ 19-2-2025ರಿಂದ 21-02-2025ರವರೆಗೆ ನಡೆಯಲಿದೆ.
ದಿನಾಂಕ 19-02-2025ನೇ ಬುಧವಾರ ಬೆಳಿಗ್ಗೆ 7-30ಕ್ಕೆ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಫಲಸಮರ್ಪಣೆ, ಗುರುಪ್ರಾರ್ಥನೆ, ಗಣಪತಿಪೂಜೆ, ಪುಣ್ಯಾಹ, ನಾಂದಿ, ಋತ್ವಿಗ್ವರಣೆ, ಅನುಗ್ರಹ ಸ್ನಪನ, ಬಿಂಬಶುದ್ಧಿ ಹೋಮ, ಬಿಂಬಶುದ್ಧಿ ಕಲಶ ಸ್ಥಾಪನೆ. ಸಂಜೆ5-30ರಿಂದ ಸ್ಥಾನಶುದ್ಧಿ, ಪ್ರಸಾದಶುದ್ಧಿ, ವಾಸ್ತುರಾಕ್ಷೋಘ್ನ ಹೋಮ, ವಾಸ್ತುಪೂಜೆ, ಬಲಿ ಕಲಾಸಂಕೋಚ, ಬಿಂಬಶುದ್ಧಿ, ನೇತ್ರೋನ್ಮಿಲನ, ಶಯ್ಯಾಕಲ್ಪನ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6-30ರಿಂದ ಶ್ರೀ ಕೋದಂಡರಾಮ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
20-02-2025ನೇ ಗುರುವಾರ ಬೆಳಿಗ್ಗೆ 8-30ರಿಂದ ಗುರುಪ್ರಾರ್ಥನೆ, ಪುಣ್ಯಾಹ, ಪ್ರತಿಷ್ಠಾಧಿವಾಸಹೋಮ, ನಪುಂಸಕಶಿಲಾಧಿವಾಸ ಹೋಮ, ಅಷ್ಟಬಂಧ ಹೋಮ ಗಂಟೆ 11-50ಕ್ಕೆ ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ಚನ್ನಕೇಶವಸ್ವಾಮಿಯ ಬಿಂಬ ಪ್ರತಿಷ್ಠಾಪನೆ, ಅಷ್ಠಬಂಧ ಸಂಯೋಜನೆ, ಪ್ರಾಣಪ್ರತಿಷ್ಠ. ಸಾಯಂಕಾಲ ಕಲಾತತ್ವಹೋಮ, ತತ್ವಕಲಶಾಭಿಷೇಕ, 108 ಬ್ರಹ್ಮಕುಂಭ ಪ್ರತಿಷ್ಠೆ, ಆಧಿವಾಸ ಹೋಮ.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6-30ರಿಂದ ಶ್ರೀ ವಿದ್ಯಾಭೂಷಣರು ಮತ್ತು ತಂಡದವರಿಂದ ಭಕ್ತಿಗಾನ ಲಹರಿ.
21-02-2025ರಂದು ಬೆಳಿಗ್ಗೆ 108 ಬ್ರಹ್ಮ ಕುಂಭಾಭಿಷೇಕ ಮಧ್ಯಾಹ್ನ ರಥಾರೋಹಣ, ರಥೋತ್ಸವ, ಅನ್ನಸಂತರ್ಪಣೆ.ಸಂಜೆ 4-00ಕ್ಕೆ ಧಾರ್ಮಿಕ ಸಭೆ.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ರಿಂದ ಗೆಜ್ಜೆನಾದ ತಂಡ ಮಂಗಳೂರು ಇವರಿಂದ ನೃತ್ಯರೂಪಕ ನಡೆಯಲಿದೆ ಎಂದು ವಹಿವಾಟುದಾರರಾದ ಟಿ.ಎಸ್. ದಿವಾಕರ ತಿಳಿಸಿದ್ದಾರೆ.
