ಕಳಸ ಲೈವ್ ವರದಿ
ಕಳಸದಲ್ಲಿ ಹಲವಾರು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ ಸನ್ ರೈಸ್ ಕಂಪ್ಯೂಟರ್ ಸೆಂಟರ್ ಗೆ I act ದೆಹಲಿ ಸಂಸ್ಥೆಯಿಂದ ಬೆಸ್ಟ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಎಂಬ ಪ್ರಶಸ್ತಿ ಲಭಿಸಿದೆ.
ದೆಹಲಿ ಕಾರ್ಯಕ್ರಮದಲ್ಲಿ LEARN ಗೈರು ಹಾಜರಾದ ಕಾರಣ ಸಂಸ್ಥೆಯ ಅಧಿಕಾರಿಗಳು ಕುಶಾಲನಗರದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿ ಯನ್ನು ವಿನಯ್ ಶೆಟ್ಟಿ, ಉದಯ ಶೆಟ್ಟಿ ಪಡೆದುಕೊಂಡರು.
ಸನ್ ರೈಸ್ ಕಂಪ್ಯೂಟರ್ ಸೆಂಟರ್ ನಲ್ಲಿ ತರಬೇತಿ ನೀಡಿದ ಪ್ರತಿಯೊಬ್ಬ ಸಹೋದ್ಯೋಗಿಗಳಿಗೆ ,ವಿದ್ಯಾರ್ಥಿಗಳಿಗೆ ಮತ್ತು ಗ್ರಾಹಕರಿಗೆ ಸಂಸ್ಥೆಯ ವ್ಯವಸ್ಥಾಪಕಿ ಉಮಾ ವಿನಯ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
