ಕಳಸ ಲೈವ್ ವರದಿ
ಶ್ರೀ ಕಲಶೇಶ್ವರ ಸ್ವಾಮಿ ದೇವಾಲಯದಲ್ಲಿ ಫೆ 26 ರ ಬುಧವಾರದಂದು ನಡೆಯುವ “ಮಹಾಶಿವರಾತ್ರಿ ” ಅಂಗವಾಗಿ ಶ್ರೀ ಸ್ವಾಮಿಯವರ ಸನ್ನಿದಿಯಲ್ಲಿ ವಿಶೇಷ ಪೂಜೆ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ
ಬೆಳಿಗ್ಗೆ 9:00 ಗಂಟೆಯಿಂದ ವಿಶೇಷ ಸೇವೆಗಳು ಪ್ರಾರಂಭವಾಗಲಿದ್ದು, ಶತವಾರ ರುದ್ರಾಭಿಷೇಕ :1750/-ರೂ, ಏಕಾದಶವಾರ ರುದ್ರಾಭಿಷೇಕ :400/-ರೂ, ಏಕವಾರ ರುದ್ರಭಿಷೇಕ ಮತ್ತು ಅಮ್ಮನವರಲ್ಲಿ ಕುಂಕುಮಾರ್ಚನೆ, ಆನೆ ಗಣಪತಿಯಲ್ಲಿದೂರ್ವಾಷ್ಟೋತ್ತರ :200/-ರೂ, ಪಂಚಾಮೃತ ಅಭಿಷೇಕ :125/-ರೂ, ಕ್ಷೀರಾಭಿಷೇಕ :100/-ರೂ.
ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯವರ ದರ್ಶನ ಪಡೆದು ಗಂಧ ಪ್ರಸಾದ ಸ್ವೀಕರಿಸಬೇಕಾಗಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಕೊರಿರುತ್ತಾರೆ.
ಸಂಜೆ 6:00 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಹಿಳಾ ಸಂಘದವರಿಂದ ಭಜನೆ ಕಾರ್ಯಕ್ರಮ ಇರುತ್ತದೆ. ಮತ್ತು 7:00 ಗಂಟೆಯಿಂದ “ಕಲಾ ಸಿಂಚನ ” ಕಳಸ ತಂಡದವರಿಂದ ಭರತ ನಾಟ್ಯ ಕಾರ್ಯಕ್ರಮಗಳು ನಡೆಯಲಿದೆ.
