ಕಳಸ ಲೈವ್ ವರದಿ
ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದ ಕಾರ್ಯದರ್ಶಿ ಪಿ.ಡಿ ರಾಘವೇಂದ್ರ ಭಟ್ ಅವರಿಗೆ ಶೈಕ್ಷಣಿಕ ಶ್ರೇಷ್ಠತೆಗಾಗಿ ಶ್ರೀ ರಾಮಸೇವಾ ಪ್ರತಿಷ್ಠಾನ ಹನುಮಾನ್ ಗುಪ್ತಾ ಅಯೋಧ್ಯಾ ಯಿಂದ ರಾಮಲಲ್ಲಾ ಪುರಸ್ಕಾರ ನೀಡಲಾಗಿದೆ.
ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಕನ್ನಡ ಮಾಧ್ಯಮದಲ್ಲಿ ಕಳೆದ 20 ವರ್ಷಗಳಿಂದ ಶೇ100 ಫಲಿತಾಂಶವನ್ನು ನೀಡುತ್ತಿದೆ.2025ನೇ ಶೈಕ್ಷಣಿಕ ವರ್ಷದಿಂದ ಇದೇ ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ಕೂಡ ನಡೆಸಲಾಗುತ್ತದೆ.
ಕಳೆದ ಮೂವತ್ತು ವರ್ಷಗಳಿಂದ ಭಾರತೀಯ ಸಂಸ್ಕಾರ ಸಂಸ್ಕøತಿಯನ್ನು ಒಳಗೊಂಡು ನೀಡುತ್ತಿರುವ ಉತ್ತಮ ಗುಣ ಮಟ್ಟದ ಶಿಕ್ಷಣಕ್ಕಾಗಿ ಶೈಕ್ಷಣಿಕ ಶ್ರೇಷ್ಠತೆಗಾಗಿ ಈ ರಾಮಲಲ್ಲಾ ಪುರಸ್ಕಾರವನ್ನು ನೀಡಲಾಗಿದೆ.
