
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಬಾಳೆಹೊಳೆ, ಕೆಳಭಾಗ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಸ್ಕøತಿ ಕುಣಿತ ಭಜನಾ ತಂಡವನ್ನು ಉದ್ಘಾಟಿಸಲಾಯಿತು.
ಕಲಶೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಭಟ್ ಕೆಳಭಾಗ ದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಸತ್ಯನಾರಾಯಣ ಗದ್ದೆ ಮನೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಮುರಳಿಧರ ಭಟ್, ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶ್ರೀಯುತ ಸುರೇಶ್ ಜಂಟಿಯಾಗಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆಯ ಶ್ರೀಮತಿ ಸುಜಯ ಸದಾನಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಮುರಳಿಧರ ಭಟ್ ಇವರ ನೇತೃತ್ವದಲ್ಲಿ ಈ ಸಂಸ್ಕøತಿ ಕುಣಿತ ಭಜನಾ ತಂಡ ರಚನೆಯಾಗಿದೆ.ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಅನ್ನುವುದು ಹಿರಿಯರ ಮಾತು.ಮಕ್ಕಳಲ್ಲಿ ಆಧ್ಯಾತ್ಮಿಕ ಒಲುಮೆಯನ್ನು ತೋರ್ಪಡಿಸಿದಾಗ ಅವರು ಮುಂದೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಲು ಸಹಕಾರಿಯಾಗುತ್ತದೆ.ಒಂದು ಸಂಘಟನೆಯೊಂದಿಗೆ ಜೊತೆಗೂಡಿ ಸೇರಿದಾಗ ಮಕ್ಕಳಲ್ಲಿ ಶಿಸ್ತು ಕಾಣಲು ಸಾಧ್ಯವಾಗುತ್ತದೆ. ಕಳಸ ತಾಲ್ಲೂಕಿನಲ್ಲಿ ಎರಡು ಕುಣಿತ ಭಜನಾ ತಂಡಗಳನ್ನು ಮಾಡಲಾಗಿದೆ. ಮುಂದೆ ಗ್ರಾಮ ಗ್ರಾಮಗಳಲ್ಲೂ ಭಜನಾ ತಂಡಗಳು ಆಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕುಣಿತ ಭಜನೆಯ ತರಬೇತಿ ನೀಡಿದ ಶಿವಪ್ಪ ಬೆಳ್ತಂಗಡಿ ಇವರನ್ನು ಗೌರವಿಸಲಾಯಿತು.
ಕೆಳಭಾಗ ದುರ್ಗಾಪರಮೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಆರ್.ವಿ ಶಿವರಾಂ, ಉಪೇಂದ್ರ ಗೌಡ, ಸರೋಜ, ಸುದರ್ಶನ್ ಉಪಸ್ಥಿತರಿದ್ದರು.



