
ಕಳಸ ಲೈವ್ ವರದಿ
ಡಾ|ರಾಜ್ ಕನ್ನಡ ಸಂಘ ಕಳಸ ಹಾಗೂ ಕರವೇ(ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಡಾ||ಪುನೀತ್ ರಾಜ್ಕುಮಾರ್ ವರ 50ನೇ ವರ್ಷ ಹುಟ್ಟುಹಬ್ಬದ ದಿನವನ್ನು ಅಪ್ಪು ಉತ್ಸವವನ್ನಾಗಿ ದಿನಾಂಕ: 17-03-2025 ರಂದು ಸಂಘದ ಕಚೇರಿ ಮುಂಭಾಗ ನಡೆಸಲಾಗುವುದು ಎಂದು ಕರವೇ(ಪ್ರವೀಣ್ ಶೆಟ್ಟಿ ಬಣ)ದ ಅಧ್ಯಕ್ಷ ಚೌಡ ನಾಯ್ಕ ತಿಳಿಸಿದ್ದಾರೆ.

ಅಂದು ಸಂಜೆ 7-00 ಗಂಟೆಗೆ ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಲಾಗುವುದು. 17ನೇ ತಾರಿಕಿಗೆ ಹುಟ್ಟಿದ ಪ್ರತಿಯೊಬ್ಬರಿಗೂ ಅಂದು ಕೇಕ್ ಕತ್ತರಿಸುವ ಸಂದರ್ಭದಲ್ಲಿ ಭಾಗಿಯಾಗಲು ಅವಕಾಶವಿದೆ.ನಂತರ ಶಂಕರ್ ಸಾರಥ್ಯದಲ್ಲಿ ಕೋಟೆಹೊಳೆ ಬ್ರದರ್ಸ್ ಇವರಿಂದ ಕರೋಕೆ ಆರ್ಕೇಸ್ಟ್ರಾ ನಡೆಯಲಿದೆ.ಅಲ್ಲದೆ ಈ ಸಂದರ್ಭದಲ್ಲಿ ಶೌರ್ಯ ಕಳಸ ಘಟಕದ ಸದಸ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.




