ಕಳಸ ಲೈವ್ ವರದಿ
ಮಳೆಗಾಗಿ ಕಲಶೇಶ್ವರ ಹಾಗೂ ಪರಿವಾರ ದೇವರುಗಳಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಇದೇ ತಿಂಗಳ 15ನೇ ತಾರಿಕಿನಂದು ನಡೆಯಲಿದೆ.
ಅಂದು ಶ್ರೀ ಕಲಶೇಶ್ವರ ಸ್ವಾಮಿ ದೇವರ ಸನ್ನಿಧಿಯಲ್ಲಿ ಶತವಾರ ರುದ್ರಾಭಿಷೇಕ, ಏಕದಶರುದ್ರಹೋಮ, ಪರ್ಜನ್ಯಜಪ ಮತ್ತು ಪರ್ಜನ್ಯಹೋಮ.ಸರ್ವಾಂಗಸುಂದರೀ ಅಮ್ಮನವರ ಸನ್ನಿಧಿಯಲ್ಲಿ ಸಹಸ್ರನಾಮ ಕುಂಕುಮಾರ್ಚನೆ, ಆನೆವಿಘ್ನೇಶ್ವರಸ್ವಾಮಿ ಸನ್ನಿಧಿಯಲ್ಲಿ ಅಷ್ಟೋತ್ತರ, ಪಂಚಕಜ್ಜಾಯ ನಿವೇದನೆ. ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ಚರು ಬಲಿ ಸಮರ್ಪಣೆ ಹಾಗೂ ಕಲಶೇಶ್ವರಸ್ವಾಮಿಯವರಲ್ಲಿ ಮಹಾಪೂಜೆಯ ಅನಂತರ ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ.
ನಂತರ ಮಹಾ ಅನ್ನಸಂತರ್ಪಣೆ ಇತ್ಯಾಧಿ ಕಾರ್ಯಕ್ರಮಗಳು ನಡೆಯಲಿದೆ. ಹಾಗೆಯೆ ದಿನಾಂಕ 22-03-2025ರಂದು ಶ್ರೀ ಆಚಿಜನೇಯ ಸ್ವಾಮಿ ದೇವರಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಏರ್ಪಡಿಸಲಾಗಿದೆ ಎಂದು ಶ್ರೀ ಕಲಶೇಶ್ವರಸ್ವಾಮಿ ಧಾರ್ಮಿಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹೆಚ್.ವಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಜಯಕುಮಾರ್ ಭಟ್, ಖಜಾಂಚಿ ಹೆಚ್.ಡಿ ಬೋಜೇ ಗೌಡ್ರು ತಿಳಿಸಿದ್ದಾರೆ.




