ಕಳಸ ಲೈವ್ ವರದಿ
ಕಲಶೇಶ್ವರ ಹಾಗೂ ಪರಿವಾರ ದೇವರುಗಳಲ್ಲಿ ಮಳೆಗಾಗಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಯನ್ನು ಶನಿವಾರ ಮಾಡಲಾಯಿತು.
ಶ್ರೀ ಕಲಶೇಶ್ವರ ಸ್ವಾಮಿ ದೇವರ ಸನ್ನಿಧಿಯಲ್ಲಿ ಶನಿವಾರ ಶತವಾರ ರುದ್ರಾಭಿಷೇಕ, ಏಕದಶರುದ್ರಹೋಮ, ಪರ್ಜನ್ಯಜಪ ಮತ್ತು ಪರ್ಜನ್ಯಹೋಮ.ಸರ್ವಾಂಗಸುಂದರೀ ಅಮ್ಮನವರ ಸನ್ನಿಧಿಯಲ್ಲಿ ಸಹಸ್ರನಾಮ ಕುಂಕುಮಾರ್ಚನೆ, ಆನೆವಿಘ್ನೇಶ್ವರಸ್ವಾಮಿ ಸನ್ನಿಧಿಯಲ್ಲಿ ಅಷ್ಟೋತ್ತರ, ಪಂಚಕಜ್ಜಾಯ ನಿವೇದನೆ. ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ಚರು ಬಲಿ ಸಮರ್ಪಣೆ ಹಾಗೂ ಕಲಶೇಶ್ವರಸ್ವಾಮಿಯವರಲ್ಲಿ ಮಹಾಪೂಜೆಯ ಅನಂತರ ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಳಸ ಸೇರಿದಂತೆ ಸುತ್ತಮುತ್ತಲಿನ ಕೃಷಿಕರು, ಗ್ರಾಮಸ್ಥರು ಭಾಗಿಯಾಗಿ ದೇವರಿಗೆ ವಿಶೇಷ ಪ್ರಾರ್ಥನೆಯಲ್ಲಿ ಭಾಗಿಯದರು.






