ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಕೆ ಕೆಳಗೂರು ಗ್ರಾಮದ ನಾಗನಮಕ್ಕಿ ಮೂಲಕ ಬಾಳೆಹೊಳೆ ಯಿಂದ ಮರಸಣಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಇರುವ ಬೇಲಿಯನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ರಸ್ತೆ ಮಣ್ಣಿನ ರಸ್ತೆಯಗಿದ್ದು, ರಸ್ತೆಗೆ 2 ಕೋಟಿ ಅನುದಾನದಲ್ಲಿ ಕಾಂಕ್ರಿಟ್ ಹಾಕಲು ಫೆಬ್ರವರಿ 11 ರಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಗುದ್ದಲಿ ಪೂಜೆ ನಡೆಸಿದ್ದರು. ಆದರೆ ಇದೀಗ ಅರಣ್ಯ ಇಲಾಖೆ ರಸ್ತೆಯ ಮಧ್ಯೆನೇ ಅರಣ್ಯ ಇಲಾಖೆಯ ಬೇಲಿ ಇದೆ.ಇದರಿಂದ ನಮ್ಮ ರಸ್ತೆಯ ಕಾಂಕ್ರಿಟ್ ಹಾಕುವ ಕೆಲಸ ಸ್ಥಗಿತಗೊಂಡಿದೆ. ಈ ಬೇಲಿಯನ್ನು ಅರಣ್ಯ ಇಲಾಖೆ ಕೂಡಲೇ ತೆರವು ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ-ವಲಯ ಅರಣ್ಯ ಅಧಿಕಾರಿಯಾದ ಸುಂದರೇಶ್ ರವರು, ಈ ಹಿಂದೆ ರಸ್ತೆ ಚಿಕ್ಕದಾಗಿದ್ದು, ಬೇಲಿ ಯನ್ನು 2 ವರ್ಷದ ಮೊದಲೇ ರಸ್ತೆಯ ಅಂಚಿನಲ್ಲಿ ಹಾಕಿದ್ದೆವು. ಪ್ರಸ್ತುತ ರಸ್ತೆ ಕಾಂಕ್ರೀಟೀಕರಣಕ್ಕೋಸ್ಕರ ಅಗಲೀಕರಣ ಮಾಡಲಾಗಿದ್ದು, ಈ ಹಂತದಲ್ಲಿ ಬೇಲಿಯ ಎರಡೂ ಬದಿಯಲ್ಲಿ ರಸ್ತೆ ಅಗಲೀಕರಣ ಮಾಡಿರುವ ಹಿನ್ನಲೆಯಲ್ಲಿ ಬೇಲಿ ರಸ್ತೆಯ ಮಧ್ಯದಲ್ಲಿ ಕಾಣುತ್ತಿದೆ ಹೊರತು ರಸ್ತೆಯ ಮಧ್ಯದಲ್ಲಿ ಹೊಸದಾಗಿ ಬೇಲಿ ಹಾಕಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.







