
oplus_0
ಕಳಸ ಲೈವ್ ವರದಿ
ಎ.ಆರ್. ಫ್ರೆಂಡ್ಸ್ ಕೇವಲ ಕ್ರಿಕೆಟ್ಗಷ್ಟೇ ಸೀಮಿತವಾಗಿರದೆ ಇತರೆ ಸಾಮಾಜಿಕ ಕಾರ್ಯಗಳಲ್ಲೂ ತನ್ನನ್ನು ಗುರುತಿಸಿಕೊಂಡಿದೆ ಎಂದು ಟೀಮ್ ಕಳಸ ಲೀಗ್ ಅಧ್ಯಕ್ಷ ಸೂಕ್ತ ಜಿ ಗೌಡ ಹೇಳಿದರು.
ಕಳಸ ಕಾಲೇಜು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಎ.ಆರ್. ಫ್ರೆಂಡ್ಸ್, ರಾಯಲ್ ಸ್ಟ್ರೈಕರ್, ಎ.ಎಫ್.ಸಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಟೀಮ್ ಕಳಸ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಕಳಸ ತಾಲ್ಲೂಕಿನಲ್ಲಿ ಯಾರೇ ಆಗಲಿ ಬಡತನದಲ್ಲಿದ್ದು, ಆರೋಗ್ಯ ಸಮಸ್ಯೆ, ಶಾಲೆಗೆ ಹೋಗಲು ಹಣಕಾಸಿನ ತೊಂದರೆ ಆದಲ್ಲಿ ಅವರಿಗೆ ಎ.ಆರ್ ಫ್ರೆಂಡ್ಸ್ ಗಮನಕ್ಕೆ ತನ್ನಿ ಖಂಡಿತಾ ನೆರವಿಗೆ ನಿಲ್ಲುತ್ತದೆ. ಎ.ಆರ್ ಫ್ರೆಂಡ್ ಕೇವಲ ಕ್ರೀಡೆಗಷ್ಟೇ ಸೀಮಿತವಾಗಿಲ್ಲ ಈಗಾಗಲೇ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದೆ. ಯಾವುದೇ ವಯಕ್ತಿಕ ಅಭಿಲಾಷೆ ಇಲ್ಲದೆ ಕ್ರೀಡೆಗಳನ್ನು ಆಯೋಜನೆ ಮಾಡಿ ಯುವಕರಿಗೆ ಕ್ರೀಡಾ ಪ್ರೋತ್ಸಾಹ ನೀಡುವುದು ಕೂಡ ದೊಡ್ಡ ಕೆಲಸವೇ ಸರಿ ಎಂದು ಹೇಳಿದರು.
ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಒಟ್ಟು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ 16 ತಂಡಗಳು ಭಾಗವಹಿಸಿದ್ದವು.ಅಂತಿಮವಾಗಿ ಎಎಫ್ಸಿ ವಿನ್ನರ್ ಆಗಿ ಒಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದು ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರೆ ರನ್ನರ್ ಆಗಿ ವಿಜಯ ವಾರಿಯರ್ಸ್ ಐವತೈದು ಸಾವಿರದ ಐನೂರ ಐವತೈದು ರೂಪೈ ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡಿತ್ತು.ತೃತೀಯ ಬಹುಮಾನವನ್ನು ಸಿಡಿಎನ್ಎಸ್ ನೆಲ್ಲಿಬೀಡು ಇಪ್ಪತ್ತೆರಡು ಸಾವಿರದ ಇನ್ನೂರ ಇಪ್ಪತ್ತೆರಡು ರೂ ಮತ್ತು ಟ್ರೋಫಿ, ನಾಲ್ಕನೇ ಬಹುಮಾನವನ್ನು ಹನ್ನೊಂದು ಸಾವಿರದ ನೂರ ಹನ್ನೊಂದು ರೂ ಮತ್ತು ಟ್ರೋಫಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಎ.ಆರ್.ಫ್ರೆಂಡ್ಸ್ ಮಾಲಕರಾದ ರಾಜೇಶ್, ಆದರ್ಶ್, ಎಎಪ್ಸಿ ಮಾಲಕರಾದ ಶಿವರಾಜ್, ರಾಯಲ್ ಸ್ಟ್ರೈಕರ್ ಮಾಲಕರಾದ ಶ್ರೇಣಿಕ್ ಜೈನ್, ಊರಿನ ಪ್ರಮುಖ ಮುಖಂಡರಾದ ಗಿರೀಶ್ ಹೆಮ್ಮಕ್ಕಿ, ಕೆ.ಎ.ಶ್ರೇಣಿಕ್, ಮಹಮ್ಮದ್ ರಫೀಕ್, ವಿಶ್ವನಾಥ್, ಸಂತೋಷ್ ಎಂ.ಸಿ, ರವಿ ಕಳಕೋಡು, ಸತೀಶ್ ಕಲ್ಲಾನೆ, ಪ್ರಕಾಶ್ ಆಚಾರ್ಯ, ಸುನೀಲ್ ಹೆಮ್ಮಕ್ಕಿ, ರವಿ ಗೌಡ, ಅವಿನಾಶ್ ನೂಜಿ ಇತರರು ಇದ್ದರು.