ಕಳಸ ಲೈವ್ ವರದಿ
ಕಳಸ ಗುಪ್ತಚರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ ಎಸ್ ಐ ಗಿರೀಶ್ ರವರಿಗೆ 2024ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನಲ್ಲಿ ನಡೆದ ಪೋ ಲೀಸ್ ಧ್ವಜ ದಿನಾಚರಣೆಯ ಸಂಧರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಎಎಸ್ಐ ಗಿರೀಶ್ ರವರು ಚಿನ್ನದ ಪದಕವನ್ನು ಸ್ವೀಕರಿಸಿದರು.
ಗಿರೀಶ್ ಕೊಪ್ಪ ತಾಲೂಕು ಜಯಪುರ ನಿವಾಸಿಯಾಗಿರುವ ಇವರು ಈ ಹಿಂದೆ ಚಿಕ್ಕಮಗಳೂರು ಎಸ್ ಪಿ ಕಚೇರಿಯಲ್ಲಿ, ಜಯಪುರದಲ್ಲಿ ಹಾಗೂ ನಕ್ಸಲ್ ನಿಗ್ರಹ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಇತ್ತೀಚಿಗಷ್ಟೇ ನಡೆದ ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ಅದರಲ್ಲೂ ಮುಖ್ಯವಾಗಿ ನಕ್ಸಲ್ ಕೋಟೆಹೊಂಡ ರವೀಂದ್ರನ ಶರಣಾಗತಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಎರಡನೆಯ ಬಾರಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದ ರಾಜ್ಯದ ಕೆಲವೇ ಮಂದಿ ಪೋ ಲೀಸರ ಪೈಕಿ ಇವರು ಒಬ್ಬರಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡನೇ ಬಾರಿ ಈ ಪದಕ ಪಡೆದವರಲ್ಲಿ ಮೊದಲನೆಯವರಾಗಿದ್ದಾರೆ. ಈ ಹಿಂದೆ 2015 ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಇವರಿಗೆ ದೊರೆತಿತ್ತು.




