ಕಳಸ ಲೈವ್ ವರದಿ
ಕಳಸದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಪ್ರಬೋಧಿನಿ ವಿದ್ಯಾಕೇಂದ್ರದಲ್ಲಿ 2025-26ನೇ ಸಾಲಿನಿಂದ ಆಂಗ್ಲ ಮಾಧ್ಯಮ ತರಗತಿಗಳು ಪ್ರಾರಂಭವಾಗಲಿದೆ.
ಕಳೆದ ಮೂರು ದಶಕಗಳಿಂದ ಕನ್ನಡ ಮಾಧ್ಯಮದಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿರುವ ಈ ಸಂಸ್ಥೆ, ವರ್ತಮಾನ ಸನ್ನಿವೇಶಕ್ಕೆ ಅನುಗುಣವಾಗಿ ಹಾಗೂ ಪೋಷಕರ ಸಾಕಷ್ಟು ಕೋರಿಕೆಯ ಪರಿಣಾಮವಾಗಿ ಈ ಬಾರಿ ಪ್ರೀ ನರ್ಸರಿ, ಎಲ್ಕೆಜಿ, ಯುಕೆಜಿ, 1ನೇ ತರಗತಿ, 5ನೇ ತರಗತಿ ಹಾಗೂ 8ನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವರ್ಷದಿಂದ ಹಂತ ಹಂತವಾಗಿ ಉಳಿದ ತರಗತಿಗಳನ್ನು ಆಂಗ್ಲಮಾಧ್ಯಮಕ್ಕೆ ಪರಿವರ್ತಿಸಲಾಗುತ್ತದೆ.
ಈ ಶಾಲೆಯಲ್ಲಿ ಇರುವ ವಿಶೇಷತೆಗಳನ್ನು ನೋಡುತ್ತಾ ಹೋದರೆ, ಸರ್ಕಾರಿ ಪಠ್ಯಕ್ರಮದ ಜೊತೆಯಲ್ಲಿ ಸಂಸ್ಕಾರ ಪ್ರಧಾನ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ. ಈ ಹಿಂದಿನಿಂದಲೂ ಇಲ್ಲಿ ಸತತ 10ನೇ ತರಗತಿಯಲ್ಲಿ ಶೇ 100% ಪಲಿತಾಂಶ ಬಂದಿರುತ್ತದೆ. ವಿಶಾಲವಾದ ಶಾಲಾ ಕೊಠಡಿಗಳು ಹಾಗೂ ಸಭಾಂಗಣ, ನುರಿತ ಶಿಕ್ಷಕರಿಂದ ಕಂಪ್ಯೂಟರ್ ತರಬೇತಿ, ಉತ್ತಮ ಗ್ರಂಥಾಲಯ ಹಾಗೂ ಸುಸಜ್ಜಿತ ಪ್ರಯೋಗಶಾಲೆ, ಯೋಗ, ಸಂಸ್ಕøತ ಹಾಗೂ ಕ್ರೀಡಾ ಚಟುವಟಿಕೆಗೆ ಅದ್ಯತೆ, ಕನಿಷ್ಠ ಪ್ರಮಾಣದ ಬೋಧನಾ ಶುಲ್ಕ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ, ಶ್ರೀ ಕ್ಷೇತ್ರ ಹೊರನಾಡಿನ ವತಿಯಿಂದ ಮಧ್ಯಾಹ್ನದ ಪ್ರಸಾದ ಭೋಜನ, ಪ್ರಸಕ್ತ ವರ್ಷದಿಂದ ಎಲ್ಲಾ ಮಕ್ಕಳಿಗೂ ಸ್ಪೋಕನ್ ಇಂಗ್ಲೀಷ್ ವ್ಯವಸ್ಥೆ.
ಒಟ್ಟಿನಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಶೈಕ್ಷಣಿಕ, ಶಾರೀರಿಕ ಹಾಗೂ ಸಂಸ್ಕಾರ ಪ್ರಧಾನವಾದ ಚಟುವಟಿಕೆಗಳ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ. ಭಾಷಾ ಮಾಧ್ಯಮ ಬದಲಾದರೂ ಈ ಸಂಸ್ಥೆಯ ಧ್ಯೇಯೋದ್ದೇಶಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಹೆಚ್ಚಿನ ವಿವರಕ್ಕಾಗಿ 9448744428, 9481156656, 9448106599, 9538867877 ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.






