
ಕಳಸ ಲೈವ್ ವರದಿ
ಹತ್ತು ಹಲವು ವಿಭಿನ್ನ ಮತ್ತು ವಿವಿಧ ರೀತಿಯ ರುಚಿ ಶುಚಿಯಾದ ನಂದಿನಿ ವೆಜ್ ದೋಸೆ ಕ್ಯಾಂಪ್ ಕಳಸದ ಮುದ್ರಾ ಕಾಂಪ್ಲೇಕ್ಸ್ ಬಳಿ ಇದೇ ತಿಂಗಳ 11 ರಂದು ಶುಭಾರಂಭಗೊಳ್ಳಲಿದೆ.
ಪಟ್ಟಣದ ಹಿರಿಯ ವೈದ್ಯರಾದ ಡಾ.ಕೆ.ಪಿ ವಿಶ್ವನಾಥ ಪ್ರಭು ಹಾಗೂ ಉಮಾ ವಿಶ್ವನಾಥ ಪ್ರಭು ಇವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ.
ರುಚಿ ಶುಚಿಯೇ ನಮ್ಮ ಆಧ್ಯತೆ, ಗ್ರಾಹಕರ ಸಂತೃಪ್ತಿಯೇ ನಮ್ಮ ಧ್ಯೇಯ ಹಾಗೂ ಶುದ್ಧ ತುಪ್ಪ ಹಾಗೂ ಬೆಣ್ಣೆಯಿಂದಲೇ ನಾವು ಖಾದ್ಯಗಳನ್ನು ತಯಾರಿಸಿಕೊಡುತ್ತೇವೆ ಎನ್ನುವ ದ್ಯೇಯದೊಂದಿಗೆ ಈ ನಂದಿನಿ ವೆಜ್ ದೋಸೆ ಕ್ಯಾಂಪ್ ಮಾಡಲಾಗುತ್ತಿದೆ ಎನ್ನುತ್ತಾರೆ ದೋಸೆ ಕ್ಯಾಂಪ್ ಮಾಲಿಕರಾದ ಗುರು.
ಇಲ್ಲಿ ಬೆಳಿಗ್ಗೆ 7-30ಯಿಂದ 12-30 ಹಾಗೂ ಮಧ್ಯಾಹ್ನ 3-30ರಿಂದ ರಾತ್ರಿ 9-30 ರವರೆಗೆ ಪ್ರತಿ ದಿನ ಈ ಹೊಟೇಲ್ ಕರ್ತವ್ಯ ನಿರ್ವಹಿಸಲಿದ್ದು, ಇಲ್ಲಿ 50 ಬಗೆಯ ಉಪಹಾರದ ತಿನಸುಗಳು ದೊರೆಯಲಿದ್ದು, ಇದರಲ್ಲಿ 20 ಬಗೆಯ ದೋಸೆಗಳು ಲಭ್ಯವಿರುತ್ತದೆ. ಇಲ್ಲಿ ಸಿಗುವ ತಿನಸುಗಳಿಗೆ ಸಾಮಾನ್ಯ ಜನರಿಗೂ ಕೈಗೆಟುಕುವ ರೀತಿಯಲ್ಲಿ ಧರವನ್ನು ನಿಗಧಿ ಪಡಿಸಲಾಗಿದೆ.ದೇಸಿ ತುಪ್ಪ ಮತ್ತು ಬೆಣ್ಣೆಯಿಂದಲೇ ಇಲ್ಲಿ ಖಾಧ್ಯವನ್ನು ನುರಿತ ಬಾಣಸಿಗರಿಂದ ತಯಾರಿಸಲಾಗುತ್ತಿದೆ ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎನ್ನುತ್ತಾರೆ ಗುರು.





