
ಕಳಸ ಲೈವ್ ವರದಿ
ಸ್ಪೋರ್ಟಿಂಗ್ ಕ್ಲಬ್ ಕಳಸ ವತಿಯಿಂದ ಕಳಸದ ಕೆಪಿಎಸ್ ಕ್ರೀಡಾಂಗಣದಲ್ಲಿ ಇದೇ ತಿಂಗಳ 14, 15, 16ರಂದು ತೃತಿಯ ಬಾರಿಯ ಆಹ್ವಾನಿತ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯು ನಡೆಯಲಿದೆ.
ರಾಜ್ಯ ಮತ್ತು ಹೊರ ರಾಜ್ಯಗಳಿಂದ ಕ್ರಿಕೆಟ್ ಆಟಗಾರರು ಈ ಪಂದ್ಯಾವಳಿಯಲ್ಲಿ ಬಾಗವಹಿಸುತ್ತಿದ್ದು, ಸುಮಾರು 16 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಸ್ಪೋರ್ಟಿಂಗ್ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಮುಸ್ತಾಫ ಹಾಗೂ ಮಹಮ್ಮದ್ ರಫೀಕ್ ಅವರ ಮುಂದಾಳತ್ವದಲ್ಲಿ ಈ ಪಂದ್ಯಾವಳಿಯು ನಡೆಯಲಿದೆ. ವಿಶೇಷ ಆಕರ್ಷಣೆಗಳೊಂದಿಗೆ ಮತ್ತು ಹೆಸರಾಂತ ವೀಕ್ಷಕ ವಿವರಣೆಯೊಂದಿಗೆ ಪಂದ್ಯಾವಳಿಯು ನಡೆಯಲಿದ್ದು, ಮೂರು ದಿನಗಳ ಕಾಲ ಕ್ರಿಕೆಟ್ ಪ್ರೀಯರಿಗೆ ಹಬ್ಬದ ದಿನಗಳಾಗಲಿದೆ.
16ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹೊರನಾಡಿನ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿಯವರ ದಿವ್ಯ ಸಾನಿಧ್ಯದೊಂದಿಗೆ, ವಿಧಾನಸಭಾ ಸಭಾಪತಿಗಳಾದ ಯು.ಟಿ.ಖಾದರ್, ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ, ಮಾಜಿ ಮಂತ್ರಿಗಳು ರಮನಾಥ ರೈ, ಕಾಂಗ್ರೆಸ್ ಮಾಧ್ಯಮ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹಾಗೂ ಸ್ಥಳೀಯ ನಾಯಕ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರಲಿದ್ದಾರೆ.
ಅದೇ ದಿನ ಸಂಜೆ 6.30ರಿಂದ ಕಳಸದ ಇತಿಹಾಸದಲ್ಲಿಯೇ ಪ್ರಪ್ರಥಮ ಭಾರಿಗೆ ಹೆಸರಾಂತ ಕಲಾವಿದರಾದ ಸಂತೋಷ್ ವೆಂಕಿ, ಆಯುಷ್, ದಿವ್ಯ ರಾಮಚಂದ್ರ, ಪೃಥ್ವಿ ಭಟ್ ಹಾಗೂ ಇತರೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅದ್ದೂರಿಯ ಮ್ಯೂಸಿಕಲ್ ನೈಟ್ ಕಾರ್ಯಕ್ರಮವು ನಡೆಯಲಿದೆ.