ಕಳಸ ಲೈವ್ ವರದಿ
ಕಾಡ್ಲಿಚ್ಚು ಹಿನ್ನೆಲೆಯಲ್ಲಿ ಚಾರಣಿಗರ ಕ್ಷೇಮ ಗಮನದಲ್ಲಿರಿಸಿಕೊಂಡು ನಿಬರ್ಂಧಿಸಲಾಗಿದ್ದ ಕುದುರೆಮುಖ ವನ್ಯಜೀವಿ ವಿಭಾಗದ ವಿವಿಧ ಚಾರಣ ಪಥಗಳಾದ ನೇತ್ರಾವತಿ ಪೀಕ್, ಕುದುರೆಮುಖ ಪೀಕ್ ಪ್ರಸ್ತುತ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸಂಭವಿಸಿರುವ ಹಿನ್ನೆಲೆ, ಮೇ 1ರಿಂದ ಜಾರಿಗೆ ಬರುವಂತೆ ಚಾರಣಿಗರಿಗೆ ವೀಕ್ಷಣೆ ಮುಕ್ತಗೊಳಿಸಲಾಗಿದೆ.
ಪ್ರವಾಸಿಗರು ಆನ್ ಲೈನ್ aranyavihara.karnataka.gov.in ಟಿಕೆಟ್ ಕಾಯ್ದಿರಿಸಿ ಚಾರಣ ಮಾಡಬಹುದಾಗಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.


