


ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಮರಸಣಿಗೆ ಶ್ರೀ ಮಹಾಲಿಂಗೇಶ್ವರಸ್ವಾಮಿಯವರ ದೇವಸ್ಥಾನದಲ್ಲಿ ಶನಿವಾರ ಶ್ರೀ ನಾಗಪ್ರತಿಷ್ಠೆ, ನಾಗಲಮ್ಮ, ರಾಜದೇವತೆ, ಚೌಡಿ, ಒಂಟಿ ಪಂಜುರ್ಲಿ, ಹಾಗೂ ಜೋಡಿ ಭೂತಗಳ ಪುನಃ ಪ್ರತಿಷ್ಠೆ ನಡೆಯಿತು.
ಕಳೆದ ಸೋಮವಾರ ಇಲ್ಲಿ ಶ್ರೀ ಮಹಾಲಿಂಗೇಶ್ವರಸ್ವಾಮಿಯವರ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿತ್ತು.
ಶನಿವಾರ ಬೆಳಿಗ್ಗೆ ವಿವಿದ ಪೂಜಾ ವಿಧಾನಗಳು ನಡೆದು ನಂತರ ಶ್ರೀ ನಾಗಪ್ರತಿಷ್ಠೆ, ನಾಗಲಮ್ಮ, ರಾಜದೇವತೆ, ಚೌಡಿ, ಒಂಟಿ ಪಂಜುರ್ಲಿ, ಹಾಗೂ ಜೋಡಿ ಭೂತಗಳ ಪುನಃ ಪ್ರತಿಷ್ಠೆ ನಡೆಯಿತು.


