ಕಳಸ ಲೈವ್ ವರದಿ
ಸಮುದಾಯ ಶೌಚಾಲಯಕ್ಕೆ ಅಕ್ರಮವಾಗಿ ಬೇಲಿ ಹಾಕಿರುವುದನ್ನು ಕೂಡಲೇ ತೆರವು ಮಾಡಬೇಕು ಮತ್ತು ಕುಡಿಯುವ ನೀರಿನ ಬಾವಿಗಾಗಿ ನಿವೇಶನ ಮಂಜೂರು ಮಾಡಬೇಕು ಇಲ್ಲವಾದಲ್ಲಿ ಕಳಸ ಗ್ರಾಮ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಯ ಮುಖಂಡರುಗಳು ಧರಣಿ ಮಾಡುವುದಾಗಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ಕುಮಾರಿ ಮತ್ತು ಉಪಾಧ್ಯಕ್ಷ ಭಾಸ್ಕರ್ ತಿಳಿಸಿದ್ದಾರೆ.
ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ 641ರಲ್ಲಿ ಪಂಚಾಯಿತಿ ವತಿಯಿಂದ ಸಮುದಾಯ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ ಈ ಶೌಚಾಯಕ್ಕೆ ಸ್ಥಳಿಯರೊಬ್ಬರು ಅಕ್ರಮವಾಗಿ ಬೇಲಿ ಹಾಕಿದ್ದಾರೆ.ಇದೇ ಸ್ಥಳದಲ್ಲಿ ನೀರಿನ ಟ್ಯಾಂಕ್ ಇದ್ದು, ಈ ಟ್ಯಾಂಕಿನಿಂದ ನೀರುಗಂಟಿ ಸಾರ್ವಜನಿಕರಿಗೆ ನೀರು ಪೂರೈಕೆ ಮಾಡುವಾಗ ಅವ್ಯಾಚ ಶಬ್ದಗಳಿಂದ ಮಾತನಾಡಿ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆಯು ಕಳಸ ತಹಶೀಲ್ದಾರ್ಗೆ ಪತ್ರ ಮುಖೇನ ತಿಳಿಸಿದ್ದೇವೆ.ಹಾಗು ಕುಡಿಯುವ ನೀರಿನ ಬಾವಿಗಾಗಿ ಟ್ಯಾಂಕಿಕಾಡು ಮತ್ತು ಕಚನಹಕ್ಲು ಕೆರೆಯ ಹತ್ತಿರ ನಿವೇಶನ ಮಂಜೂರು ಮಾಡಿಕೊಡುವ ಬಗ್ಗೆಯೂ ಕೇಳಿಕೊಂಡಿದ್ದೇವೆ.ಆದರೆ ಇದುವರೆಗೂ ಯಾವುದೇ ಉತ್ತರವನ್ನು ತಹಶೀಲ್ದಾರ್ ನೀಡಿರುವುದಿಲ್ಲ.
ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಲು ನೈರ್ಮಲ್ಯಕ್ಕೆ ಸಮಸ್ಯೆ ಆಗಿರುವುದರಿಂದ 10 ದಿನದ ಒಳಗಾಗಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ತಾಲ್ಲೂಕು ಕಚೇರಿ ಮುಂಭಾಗ ಧರಣಿ ಮಾಡುವುದಾಗಿ ತಿಳಿಸಿದ್ದಾರೆ.

