oplus_0

ಕಳಸ ಲೈವ್ ವರದಿ
ಕನ್ನಡ ಬಾಷೆಯ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ ತಮಿಳು ಚಿತ್ರನಟ ಕಮಲಹಾಸನ್ ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯಿಸಿ ಡಾ|ರಾಜ್ ಕನ್ನಡ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ) ಬಣ ಇವರಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಕಳಸ ಮಹಾವೀರ ವೃತ್ತ ಬಳಿ ನಟ ಕಮಲ್ ಹಾಸನ್ ಅವರ ಬ್ಯಾನರ್ಗೆ ಬೆಂಕಿ ಹಚ್ಚಿ ಘೋಷನೆಗಳನ್ನು ಕೂಗಲಾಯಿತು.ನಂತರ ಕಳಸ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ|ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಮಾತನಾಡಿ ಕನ್ನಡ ಬಾಷೆ ಹುಟ್ಟಿದ್ದೇ ತಮಿಳು ಬಾಷೆಯಿಂದ ಎಂದು ನೀಡಿದ ಹೇಳಿಕೆ ಅಸಂಬದ್ದವಾಗಿದ್ದು ಕೋಟ್ಯಾಂತರ ಕನ್ನಡಿಗರಿಗೆ ಅವಮಾನ ಮಾಡಿದಂತಾಗಿದೆ. ನಟ ಕಮಲ್ಹಾಸನ್ಗೆ ಕನ್ನಡ ಬಾಷೆ ಸಂಸ್ಕøತಿ ಪರಂಪರೆಯ ಅರಿವಿಲ್ಲ ಕನ್ನಡ ವಿರೋಧಿ ಹೇಳಿಕೆ ನೀಡಿಯೂ ಕ್ಷಮೆ ಕೇಳದೆ ಉದ್ಧಟತನ ಮೆರೆಯುತ್ತಿರುವ ಕಮಲ್ಹಾಸನ್ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿದೆ.ಕನ್ನಡಿಗರ ತಂಟೆಗೆ ಬಂದರೆ ನಾವು ಬಿಡುವುದಿಲ್ಲ ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಕರವೇ(ಪ್ರವೀಣ್ ಶೆಟ್ಟಿ ಬಣ) ಗೌರವಾಧ್ಯಕ್ಷ ಶರೀಫ್ ಮಾತನಾಡಿ ಕನ್ನಡಿಗರು ಶಾಂತ ಸ್ವಾಭಾವದವರು.ಹಾಗಂತ ಕನ್ನಡಿಗರ ವಿರುದ್ಧ ಕನ್ನಡ ಬಾಷೆ, ನೆಲ-ಜಲಕ್ಕೆ ದಕ್ಕೆ ಬಂದಾಗ ನಾವು ಬಿಡುವುದಿಲ್ಲ.ಕಮಲ್ಹಾಸನ್ ಕನ್ನಡ ಬಾಷೆಯು ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ನಾವು ಸಹಿಸೋದಿಲ್ಲ.ಇವರು ಕನ್ನಡಿಗರ ಪರವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕಸಾಪ ಜಿಲ್ಲಾ ಸಂಚಾಲಕ ಪಾಂಡುರಂಗ, ಸಂಸೆ ಕರವೇ ಘಟಕ ಅಧ್ಯಕ್ಷ ಚೋಯಿ, ಸುಂಕಸಾಲೆ ಅಧ್ಯಕ್ಷ ಹೂವಪ್ಪ, ಕಾರ್ಯಕರ್ತರಾದ ಗೋಪಾಲ, ಸಂತೋಷ, ಅರವಿಂದ, ಸುಂದರೇಶ ಆಚಾರ್ಯ, ರಾಘವೇಂದ್ರ ಆಚಾರ್ಯ, ಹರೀಶ ಇತರರು ಇದ್ದರು.
