

ಕಳಸ ಲೈವ್ ವರದಿ
ಮರಸಣಿಗೆ ಗ್ರಾಮದ ಗಾಂಧಿನಗರ ಪ್ರೇಮ ಇವರ ಮನೆಗೆ ಸೋಮವಾರ ಮಧ್ಯರಾತ್ರಿ ಅಕೇಶಿಯ ಮರವೊಂದು ಬಿದ್ದು ಪ್ರೇಮ ಅವರಿಗೆ ಗಾಯವಾಗಿದ್ದು, ಮನೆ ಜಖಂ ಗೊಂಡಿದೆ.
ಮರ ಬಿದ್ದ ಕೂಡಲೇ ಸಹಾಯಕ್ಕಾಗಿ ಮರಸಣಿಗೆ ಗ್ರಾ.ಪಂ ಸದಸ್ಯರಾದ ವಿಶ್ವನಾಥರವರಿಗೆ ಕರೆ ಮಾಡಿ ತಿಳಿಸಿದ್ದಾರೆ.ಕೂಡಲೆ ಪಂ ಸದಸ್ಯರಾದ ವಿಶ್ವನಾಥ ಮತ್ತು ಗುಲಾಬಿ ಎಂಬ ಇಬ್ಬರು ಸದಸ್ಯರು ಸ್ಥಳಕ್ಕೆ ಬಂದು ತೊಂದರೆಗೆ ಒಳಗಾದವರ ನೆರವಿಗೆ ನಿಂತಿದ್ದಾರೆ.
ಮನೆಯಲ್ಲಿ ಪ್ರೇಮ ಹಾಗೂ ಕುಟುಂಬಸ್ಥರು ಮಲಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪ್ರೇಮ ಅವರ ತಲೆಗೆ ಗಾಯಗಳಾಗಿದ್ದು, ಕಳಸ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಮನೆ ಸಂಪೂರ್ಣ ಜಖಂಗೊAಡಿದೆ. ಮನೆಯಲ್ಲಿದ್ದ ದಿನ ಬಳಕೆ ಸಾಮಾಗ್ರಿಗಳು ಎಲ್ಲವೂ ನೀರು ಪಾಲಾಗಿದೆ.
ರಾತ್ರಿ ಒಂದು ಗಂಟೆಗೆ ಸ್ಥಳಕ್ಕೆ ಆಗಮಿಸಿ ತೊಂದರೆಗೆ ಒಳಗಾದ ಕುಟುಂಬದ ನೆರವಿಗೆ ಸ್ಪಂದಿಸಿದ ಗ್ರಾ.ಪಂ ಸದಸ್ಯರ ನಡೆಯನ್ನು ಗ್ರಾಮಸ್ಥರು ಹಾಗೂ ತೊಂದರೆಗೆ ಒಳಗಾದ ಕುಟುಂಬ ಶ್ಲಾಘಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ತಾಲ್ಲೂಕು ಅಧಿಕಾರಿಗಳು, ಅರಣ್ಯ ಇಲಾಖೆ, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಸ್ಥಳೀಯರು ಮರ ತೆರವು ಮಾಡುವ ಕಾರ್ಯಚರಣೆಯಲ್ಲಿ ನೆರವಾಗಿದ್ದಾರೆ. ಶಾಸಕಿ ನಯನ ಮೋಟಮ್ಮ ಕುಟುಂಬಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.
