*BCA ಪದವಿ ಪ್ರವೇಶಾತಿ ಪ್ರಾರಂಭ.*
ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ ಇಲ್ಲಿ BCA (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್) ಕೋರ್ಸ್ ವ್ಯಾಸಂಗಕ್ಕೆ ಲಭ್ಯವಿದೆ.
ಇದು ಕಳಸ ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಊರಲ್ಲಿಯೇ ತಂತ್ರಜ್ಞಾನ ಆಧಾರಿತ ಪದವಿ ಪಡೆಯುವ ಸುಲಭ ಅವಕಾಶವಾಗಿದೆ.
ವಿದ್ಯಾರ್ಥಿಗಳು ಬಿ.ಸಿ.ಎ ಕೋರ್ಸ್ ಅನ್ನು ವ್ಯಾಸಂಗ ಮಾಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಐ.ಟಿ ಕ್ಷೇತ್ರದಲ್ಲಿ ಭದ್ರಪಡಿಸಿಕೊಳ್ಳಬಹುದು ಅಥವಾ ಸ್ವಂತ ಉದ್ಯೋಗವನ್ನು ಪ್ರಾರಂಬಿಸಬಹುದು.
*ಕಳಸ ಪದವಿ ಕಾಲೇಜಿನ ವೈಶಿಷ್ಟ್ಯಗಳು*
NAAC ನಿಂದ ‘A’ ಗ್ರೇಡ್ ಮಾನ್ಯತೆ ಪಡೆದಿದೆ.
ಕುವೆಂಪು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿದೆ.
ಶಾಂತ ಮತ್ತು ಹಸಿರು ಕ್ಯಾಂಪಸ್.
ಉತ್ತಮ ಸೌಲಭ್ಯಗಳಿರುವ ಕಂಪ್ಯೂಟರ್ ಲ್ಯಾಬ್.
ಸುಸಜ್ಜಿತ ಗ್ರಂಥಾಲಯ.
ಅನುಭವಿ ಬೋಧಕರು.
ಮಧ್ಯಾಹ್ನ ಭೋಜನ (Mid-day Meals) ವ್ಯವಸ್ಥೆ.
ಮಲ್ಟಿ-ಜಿಮ್ ಸೇರಿದಂತೆ ಇತರೆ ಸೌಲಭ್ಯಗಳು
*ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್ ಗಳು:*
ಬಿ.ಎ (HEP & HKJ)
ಬಿಕಾಂ (ವಿಶ್ವವಿದ್ಯಾಲಯದ ಕಡ್ಡಾಯ ವಿಷಯಗಳು)
ಬಿ.ಸಿ.ಎ (ವಿಶ್ವವಿದ್ಯಾಲಯದ ಕಡ್ಡಾಯ ವಿಷಯಗಳು)
ದಾಖಲಾತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಕಾಲೇಜಿಗೆ ಭೇಟಿ ನೀಡಿ ಅಥವಾ ಪ್ರವೇಶ ವಿಭಾಗವನ್ನು ಸಂಪರ್ಕಿಸಿ.
ಕಾಲೇಜಿನ ದೂರವಾಣಿ ಸಂಖ್ಯೆ: 08263 295233.
