ಕಳಸ ಲೈವ್ ವರದಿ
ಅಖಿಲ ಕರ್ನಾಟಕ ಒಕ್ಕಲಿಗ ಕಳಸ ತಾಲ್ಲೂಕು ಮಹಿಳಾ ಘಟಕದ ಉದ್ಘಾಟನೆ ನಡೆಯಿತು.
ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಸಭಾಂಗಣದಲ್ಲಿ ಘಟಕವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಒಕ್ಕಲಿಗ ಸಂಘದ ಕಾರ್ಯದರ್ಶಿ ರೇವತಿ ಧರ್ಮಪಾಲ್, ಹೆಣ್ಣು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೆ ಸಾರ್ವಜನಿಕವಾಗಿಯೂ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.ಸಂಘಟನೆಗಳ ಮುಖಾಂತರ ನಮ್ಮನ್ನು ನಾವು ತೊಡಗಿಸಿಕೊಂಡು ನಮ್ಮಲ್ಲಿರುವ ಕೀಳಿರುಮೆಯನ್ನು ದೂರ ಮಾಡಲು ಸಹಕಾರಿಯಾಗುತ್ತದೆ.ಸಂಘಟನೆಗಳ ಮುಖಾಂತರ ನಮ್ಮ ಗಟ್ಟಿತನವನ್ನು ತೋರಿಸಿಕೊಳ್ಳಬೇಕು ಎಂದು ಹೇಳಿದರು.
ಅಖಿಲ ಕರ್ನಾಟಕ ಒಕ್ಕಲಿಗ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕವಿತಾ ಶೇಖರ್ ಮಾತನಾಡಿ ಒಕ್ಕಲಿಗರಲ್ಲಿ ಒಟ್ಟು ೧೧೦ ಪಂಗಡಗಳಿದ್ದು, ಈ ಎಲ್ಲಾ ಪಂಗಡಗಳನ್ನು ಒಟ್ಟು ಸೇರಿಸಿ ದೂರ ದೃಷ್ಠಿ ಇಟ್ಟುಕೊಂಡು ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಎಂದು ಮಾಡಲಾಗಿದೆ.ಎಲ್ಲಾ ಪಂಗಡಗಳು ಸೇರಿದಾಗ ನಮ್ಮ ಒಗ್ಗಟ್ಟನ್ನು ಇಡೀ ಸಮಾಜಕ್ಕೆ ತೋರಿಸಿಕೊಡಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಪರೇಷನ್ ಸಿಂದೂರ್ ಕಾರ್ಯಚರಣೆಯಲ್ಲಿ ಗಾಯಕೊಂಡು ತವರಿಗೆ ಮರಳಿದ ಯೋದ ರಾಜಪ್ಪ ಅವರನ್ನು ಗೌರವಿಸಿ ಅವರಿಗೆ ಸಹಾಯದನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕಳಸ ತಾಲ್ಲೂಕು ಘಟಕದ ಅಧ್ಯಕ್ಷೆ ತಾರಾ ರಮೇಶ್, ಒಕ್ಕಲಿಗ ಸಂಘದ ಜಿಲ್ಲಾ ನಿರ್ದೇಶಕರಾದ ಸಂತೋಷ್ ಹಿನಾರಿ, ತಾಲ್ಲೂಕು ಘಟಕದ ನಿರ್ದೇಶಕರುಗಳಾದ ಅಮಿತಾ ವಿನಾಯಕ, ರೀತ ಪ್ರಕಾಶ್,ನಯನ ಸುಂದರೇಶ್, ಪ್ರಿಯಾಂಕ ಸಂತೋಷ್, ಕಾವ್ಯ ರವಿ, ಅನುರಾಧ ಕೃಷ್ಣೇಗೌಡ, ಸಂಗೀತ ವಿವೇಕ್ ಇತರರು ಇದ್ದರು.


