ಕಳಸ ಲೈವ್ ವರದಿ
ಪೊಲೀಸ್ ಇಲಾಖಾ ವತಿಯಿಂದ ನಾಳೆ(ಜೂನ್ ೨೪)ರಂದು ಕಳಸದಲ್ಲಿ ಜನ ಸಂಪರ್ಕ ಸಭೆ ನಡೆಸುತ್ತಿದ್ದು, ಇದನ್ನು ನಾವು ಬಹಿಷ್ಕರಿಸುತ್ತಿದ್ದೇವೆ ಎಂದು ಕೆಸಿಎ ಬ್ಯಾಂಕ್ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿದ ಅವರು ಕಳಸದಲ್ಲಿ ಮಾದಕ ವಸ್ತುಗಳ ಹಾವಳಿ ಮಿತಿ ಮೀರುತ್ತಿದ್ದು ಮತ್ತು ಕಳಸದ ಖಾಸಗಿ ಕಾಫೀ ತೋಟವೊಂದರಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿದ ಸುಮಾರು ೫೦ ಭದ್ರತಾ ಸಿಬ್ಬಂದಿ ಇದ್ದು ಆಸುಪಾಸಿನ ತೋಟಗಳ ಕೃಷಿಕರಿಗೆ ಬೆದರಿಕೆ ಗೂಂಡಾಗಳAತೆ ವರ್ತಿಸಿ ದಬ್ಬಾಳಿಕೆ ಮಾಡುತ್ತಿದ್ದಾರೆ ಈ ಬಗ್ಗೆ ಈ ಕಾರಣಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕಳಸಕ್ಕೆ ಬಂದು ಸಾರ್ವಜನಿಕ ಸಭೆ ನಡೆಸಿ ಇದನ್ನು ಪರಿಹರಿಸಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದೇವು.
ಆದರೆ ಜೂನ್ ೨೪ರಂದು ನಡೆಯುವ ಜನಸಂಪರ್ಕ ಸಭೆಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಬರುತ್ತಿಲ್ಲ. ನಮ್ಮ ಸಮಸ್ಯೆಗೆ ಪೊಲೀಸ್ ಉಪಾಧೀಕ್ಷಕರು ಹಾಗೂ ಕಳಸ ಪೊಲೀಸರಿಂದ ಪರಿಹಾರ ಸಿಗುವುದು ಕಷ್ಟ ಸಾಧ್ಯ ಆದ್ದರಿಂದ ಈ ಸಭೆಯನ್ನು ನಾವು ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.


