

ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಾಧ್ಯಂತ ಮುಂಗಾರು ಮಳೆ ಮತ್ತೆ ಚುರುಕು ಕಾಣತೊಡಗಿದ್ದು ಬಸ್ರಿಕಲ್ ನಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದಿದ್ದು, ಕೆಲ ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮAಗಳವಾರ ಬೆಳಿಗ್ಗೆಯಿಂದಲೇ ಮಳೆ ಚುರುಕು ಕಂಡಿದ್ದು, ಮಳೆಯ ಜೊತೆಗೆ ಗಾಳಿಯ ವೇಗವೂ ಹೆಚ್ಚಾಗತೊಡಗಿದೆ.ಮಂಗಳವಾರ ಮದ್ಯಾಹ್ನದ ಸಮಯಕ್ಕೆ ಕಳಸ -ಕುದುರೆಮುಖ ರಾಜ್ಯ ಹೆದ್ದಾರಿಯ ಮಧ್ಯೆ ಬಸ್ರಿಕಲ್ ಚೆಕ್ ಪೋಸ್ಟ್ ಬಳಿ ಪ್ರತೀ ವರ್ಷ ದೇವರು ಕೂರುತ್ತಿದ್ದ ದೇವರ ಮರವೆಂದೆ ಹೇಳುತ್ತಿದ್ದ ಬೃಹತ್ ಗಾತ್ರದ ಶತಮಾನಗಳನ್ನು ಕಂಡ ದೇವರ ಮರವೊಂದು ಧರೆಗುರುಳಿದೆ.ಅಕ್ಕ ಪಕ್ಕ ಮನೆಗಳಿದ್ದು ಯಾವುದೇ ಅಪಾಯಗಳು ಎದುರಾಗದೆ ರಸ್ತೆಗೆ ಮರ ಬಿದ್ದು ರಸ್ತೆಯ ಇನ್ನೊಂದು ಭಾಗದಲ್ಲಿದ್ದ ಬಿ.ಕೆ.ಮಹೇಶ್ ಎಂಬುವವರ ಅಂಗಡಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ. ವಿದ್ಯುತ್ ತಂತಿ ಮೇಲೆ ಮರ ಬಿದ್ದ ಹಿನ್ನಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮರ ಬಿದ್ದ ಹಿನ್ನಲೆಯಲ್ಲಿ ಕಳಸ-ಮಂಗಳೂರು ರಸ್ತೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ಕಡಿತಗೊಂಡಿತ್ತು. ಕಿ.ಮೀ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಅರಣ್ಯ ಇಲಾಖೆ, ಕುದುರೆಮುಖ ಪೊಲೀಸರು ಹಾಗೂ ಸ್ಥಳೀಯರು ಸೇರಿ ಮರವನ್ನು ತೆರವುಗೊಳಿಸಿದರು.


