ಕಳಸ ಲೈವ್ ವರದಿ
ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ಕಳಸ ಸಂಘಟನಾ ಕಾರ್ಯದರ್ಶಿ ರಮೇಶ್ ಕೆಳಗೂರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದು, ಈ ಮನವಿಯಲ್ಲಿ ಕಳಸ ಮತ್ತು ಮೂಡಿಗೆರೆ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರು ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲ ಬಹುತೇಕ ಶಾಲೆಗಳಲ್ಲಿ ಅಥಿತಿ ಶಿಕ್ಷಕರೇ ಬೆಳಗ್ಗೆ ಶಾಲೆ ಬಾಗಿಲು ತೆರೆದು ಶಾಲೆ ‘ಆರಂಭಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಈಗಿನ ಶಾಲೆಗಳು ಅಥಿತಿ ಶಿಕ್ಷಕರಿಂದಲೇ ನಡೆಯುತ್ತಿರುದೆಂದು ತಮ್ಮ ಗಮನಕ್ಕೆ ತರುತ್ತಿದ್ದೇವೆ. ಈ ರೀತಿ ಉತ್ತಮ ಕಾರ್ಯ ನಿರ್ವಹಿಸುವ ಶಿಕ್ಷರಿಗೂ ಇಂತವರಿAದ ಕೆಟ್ಟ ಹೆಸರು ಬರುವ ಹಾಗೆ ಪರಿಣಾಮ ಬೀರಬಹುದು. ಆದ್ದರಿಂದ ತಮ್ಮ ವಿಭಾಗವಾರು ಸಿ ಆರ್ ಪಿ ಗಳ ಗಮನಕ್ಕೆ ಇದ್ದರೂ ಸಹ ಇವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕಾರಣ ಯಾವುದೇ ಮಕ್ಕಳ ಕಾರ್ಯಕ್ರಮ ಇದ್ದರೂ ಇಂತಹ ಶಿಕ್ಷಕರಿಂದ ಡೋನೇಷನ್ ಸ್ವೀಕರಿಸಿ ಕಾರ್ಯಕ್ರಮ ನಡೆಸುವುದರಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಆದ್ದರಿಂದ ಇವೆಲ್ಲವನ್ನೂ ಗಮನಿಸಿ ಎಲ್ಲಾ ಶಾಲೆಗಳ ಶಿಕ್ಷಕರಿಗೂ ನೋಟಿನ್ ಕಳುಹಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಈಗಾಗಲೇ ಜಿಲ್ಲೆಯ ೮೩ ಶಾಲೆಗಳು ಮುಚ್ಚಿರುವುದರಿಂದ ಇಂತಹ ಸ್ಥಿತಿ ಮುಂದುವರೆದರೆ ಬಹುತೇಕ ಪೋಷಕರು ಮುಂದೆ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗುವುದಿಲ್ಲ ಈ ರೀತಿ ಸರ್ಕಾರಿ ಶಿಕ್ಷಣ ವ್ಯವಸ್ಥೆ ನಶಿಸುವ ಮೊದಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.


