ಕಳಸ ಲೈವ್ ವರದಿ
ತಮ್ಮ ಇಷ್ಟದಂತೆ ಕೆಲಸಕ್ಕೆ ಹಾಜರಾಗುತ್ತಿರುವ ಕಳಸ ಸಮುದಾಯ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಸಿಪಿಐ ಸಂಘಟನಾ ಕಾರ್ಯದರ್ಶಿ ರಮೇಶ್ ಕೆಳಗೂರು ಒತ್ತಾಯಿಸಿದ್ದಾರೆ.
ಈ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಕಳಸ ಸಮುದಾಯ ಆಸ್ಪತ್ರೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಹಾಜರಾಗದೆ ತಮ್ಮ ಇಷ್ಟದಂತೆ ಕೆಲಸಕ್ಕೆ ದಿನನಿತ್ಯ ಹಾಜರಾಗುತ್ತಿರುವುದು ಇತ್ತೀಚಿನ ಹಾಜರಾತಿ ರಿಜಿಸ್ಟರ್ ಗಮನಿಸಿದಾಗ ಕಂಡುಬರುತ್ತಿದ್ದು, ಬಹುತೇಕ ಸಿಬ್ಬಂದಿ ಇದೇ ಹಾದಿಯಲ್ಲಿ ಸಾಗುತ್ತಿರುವುದರಿಂದ ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲದಂತೆ ಆಗಿದೆ. ಈ ರೀತಿ ಸಾರ್ವಜನಿಕ ಸೇವೆಯಲ್ಲಿ ಜನರಿಗೆ ಸಮರ್ಪಕ ಸೇವೆ ನೀಡಬೇಕಾದ ಸರ್ಕಾರಿ ಸಂಸ್ಥೆ ಸಂಪೂರ್ಣ ಹಾದಿ ತಪ್ಪಿದ್ದು, ಇದನ್ನು ಸರಿಪಡಿಸುವ ಜವಾಬ್ದಾರಿ ಪ್ರತಿ ನಾಗರೀಕರ ಕರ್ತವ್ಯ ಅದ್ದರಿಂದ ತಾಲ್ಲೂಕು ಆಡಳಿತ ಅಧಿಕಾರಿ ತಾವಾಗಿರುವುದರಿಂದ ಕಳೆದ ಮೂರು ತಿಂಗಳಿAದ ವೇತನದಲ್ಲಿಯೂ ಯಾವುದೇ ಕಡಿತ ಮಾಡದೇ ಹಾಜರಾತಿ ಗಮನಿಸದೆ ಪೂರ್ಣ ಪ್ರಮಾಣದ ವೇತನ ನೀಡಿರುವುದು ಸಹ ಈ ಸಂದರ್ಭದಲ್ಲಿ ತಮ್ಮ ಇಲಾಖೆಯ ತಪ್ಪು ಎಂಬುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ. ಆದ್ದರಿಂದ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.


