ಕಳಸ ಲೈವ್ ವರದಿ
ತಾಲ್ಲೂಕಿನಲ್ಲಿ ಪೌತಿ ಖಾತೆ ಅಭಿಯಾನವನ್ನು ಕಂದಾಯ ಇಲಾಖೆ ಆರಂಭಿಸಿದ್ದು ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡಲಾಗುತ್ತದೆ.
ಕಳಸ ತಾಲ್ಲೂಕಿನಲ್ಲಿ 1245 ಮೃತ ಖಾತೆದಾರರ ಹೆಸರಿನಲ್ಲಿ ಭೂಮಿ ಇದೆ.ಇದರಿಂದಾಗಿ ವಾರಸುದಾರರಿಗೆ ಸವಲತ್ತುಗಳಾದ ಬೆಳೆ ವಿಮೆ, ಬೆಳೆ ಪರಿಹಾರ,ಕೃಷಿ ವಿಮೆ, ಕಿಸಾನ್ ಯೋಜನೆ, ಬ್ಯಾಂಕ್ ಸಾಲ ಸೌಲಭ್ಯ, ಕೊಳವೆ ಬಾವಿ ಸೌಲಭ್ಯ, ಕೃಷಿ ಹೊಂಡ ಮತ್ತಿತರ ವಿವಿಧ ಇಲಾಖೆಗಳ ಸೌಲಭ್ಯ ಪಡೆಯಲು ತೊಂದರೆ ಆಗುತ್ತಿದೆ ಎಂದು ತಹಶೀಲ್ದಾರ್ ಕಾವ್ಯ ತಿಳಿಸಿದ್ದಾರೆ.
ಆದ್ದರಿಂದ ಮೃತ ವ್ಯಕ್ತಿಗಳ ಹೆಸರಿನಲ್ಲಿ ಇರುವ ಖಾತೆಗಳನ್ನು ವಾರಸುದಾರರಿಗೆ ಖಾತೆ ಬದಲಾವಣೆ ಮಾಡಿಕೊಡಲು ಕ್ರಮ ವಹಿಸಲಾಗುತ್ತಿದೆ.ವಾರಸುದಾರರು ಮೃತರ ಕುಟುಂಬದ ವಂಶ ವೃಕ್ಷ, ಮರಣ ಸಮರ್ಥನ ಪತ್ರ, ಜಮೀನಿನ ಹಕ್ಕಿನ ಬಗ್ಗೆ ದಾಖಲೆ, ಪಹಣಿ ಪತ್ರ ಮತ್ತು ವಾರಸುದಾರರ ಆಧಾರ್ ಕಾರ್ಡ್ ಜೊತೆಗೆ ಸಂಬAಧಪಟ್ಟ ಗ್ರಾಮ ಆಡಳಿತ ಅಧಿಕಾರಿಯನ್ನು ಸಂಪರ್ಕಿಸಲು ತಹಶೀಲ್ದಾರ್ ಕೋರಿದ್ದಾರೆ.


