







ಕಳಸ ಲೈವ್ ವರದಿ
ಸಾರ್ವಜನಿಕ ಶ್ರೀ ಸೌಹಾರ್ದ ಗಣೇಶೋತ್ಸವದ ಎರಡನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.
ಕಳಸದ ಅರಮನೆಮಕ್ಕಿ ಮೈದಾನದಲ್ಲಿ ಆಗಸ್ಟ್ ೨೭ರಿಂದ ಸೆಷ್ಟಂಬರ್ ೪ರ ವರೆಗೆ ಸಾರ್ವಜನಿಕ ಶ್ರೀ ಸೌಹಾರ್ದ ಗಣೇಶೋತ್ಸವ ಅದ್ದೂರಿಯಾಗಿ ನಡೆಯಲ್ಲಿದ್ದು, ಇದರ ಪೂರ್ವಭಾವಿಯಾಗಿ ಬುಧವಾರ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಸಮಿತಿಯ ಅಧ್ಯಕ್ಷ ಬಿ.ವಿ.ರವಿ ರೈ, ಎರಡನೇ ವರ್ಷದ ಗಣೇಶೊತ್ಸವವು ಅದ್ದೂರಿಯಾಗಿ ನಡೆಯಲಿದ್ದು. ೨೭ರಂದು ಗಣಪತಿ ಪ್ರತಿಷ್ಠಾಪನೆ ಹಾಗೂ ಅಂದು ಕಲರ್ಸ್ ಕನ್ನಡ ಖ್ಯಾತಿಯ ಕಲಾವತಿ ದಯಾನಂದ್ ಅವರಿಂದ ಕಲಾ ಸಂಗೀತ ಸಂಜೆ, ೨೮ರಂದು ಮಕ್ಕಿಮನೆ ಕಲಾ ವೃಂದದಿAದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ೨೯ರಂದು ರಾಜ್ಯ ಮಟ್ಟದ ಸೌಹಾರ್ದ ನೃತ್ಯ ಸ್ಫರ್ಧೆ.೩೦ರಂದು ನಾಟ್ಯ ಕುಟೀರ ಹೊಸಪೇಟೆ ಇವರಿಂದ ನೃತ್ಯ ರೂಪಕ ಮತ್ತು ವಿಶೇಷ ನಾಟ್ಯ ಪ್ರದರ್ಶನ ಮತ್ತು ಯಕ್ಷ ತೆಲಿಕೆ, ೩೧ರಂದು ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಸಂಜೆ ಆಸರೆ ಪೌಂಡೇಷನ್ ವತಿಯಿಂದ ಕಳಸದ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಾಲಿತ ಶವ ಸಂಸ್ಕಾರ ಯಂತ್ರ ಹಸ್ತಾಂತರ, ರಾತ್ರಿ ಮ್ಯೂಸಿಕಲ್ ನೈಟ್, ಸೆ ೧ರಂದು ಬೆಳಿಗ್ಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಆಟೋಟ ಸ್ಪರ್ಧೆ, ಸಂಜೆ ಅಷ್ಟೆಮಿ ನಾಟಕ, ಸೆ ೨ರಂದು ಬೆಳಿಗ್ಗೆ ಚತುರ್ದ್ರವ್ಯ ಹೋಮ ಸಂಜೆ ಪುದರ್ ದೀತಿಜಿ ನಾಟಕ, ಸೆ ೩ರಂದು ಸಂಜೆ ಧಾರ್ಮಿಕ ಸಭೆ, ರಾತ್ರಿ ಮಣಿಕಂಠನ ಮಹಿಮೆ ನಾಟಕ, ಸೆ ೪ರಂದು ಬೆಳಿಗ್ಗೆ ಹೆಸರಾಂತ ಕಲಾವಿದರಿಂದ ಸಂಗೀತ ರಸಮಂಜರಿ, ರಾತ್ರಿ ವಿವಿಧ ವೇಷಭೂಷಣ, ಟ್ಯಾಬ್ಲೋಗಳ ಸ್ಪರ್ಧೆ,ರಸ್ತೆಯುದ್ದಕ್ಕೂ ದೀಪಾಲಂಕಾರ, ಆಕರ್ಷಕ ಸಿಡಿಮದ್ದುಗಳ ಮೂಲಕ ಅದ್ದೂರಿಯ ಮೆರವಣಿಗೆಯೊಂದಿಗೆ ಸ್ವಾಮಿಯ ಜಲಸ್ಥಂಭನ ನಡೆಯಲಿದೆ.
ಪ್ರತೀ ದಿನ ಅನ್ನಸಂತರ್ಪಣೆ ನಡೆಯಲಿದೆ ಎಂದು ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ರುದ್ರಯಾಚಾರ್, ಮಂಜಪ್ಪ ಪೂಜಾರಿ, ಸುಜಯ ಸದಾನಂದ, ಗೌರವ ಕಾರ್ಯದರ್ಶಿ ಬ್ರಹ್ಮದೇವ, ಖಜಾಂಚಿ ಪದ್ಮಕುಮಾರ್ ಇತರರು ಇದ್ದರು.


