
ಕಳಸ ಲೈವ್ ವರದಿ
ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆದಿರುವ ಅಪಪ್ರಚಾರ ಮತ್ತು ಪಿತೂರಿ ಖಂಡಿಸಿ ಇದೆ ೧೭ರಂದು ಪಟ್ಟಣದಲ್ಲಿ ಧರ್ಮ ಸಂರಕ್ಷಣಾ ಯಾತ್ರೆ ನಡೆಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹಿರಿಯ ಮುಖಂಡ ಕೆ.ಸಿ. ಧರಣೇಂದ್ರ ತಿಳಿಸಿದರು.
ಪಟ್ಟಣದಲ್ಲಿ ಇದೇ ವಿಚಾರಕ್ಕೆ ಸಂಬAಧಿಸಿದAತೆ ನಡೆದ ಧರ್ಮಸ್ಥಳ ಕ್ಷೇತ್ರದ ಭಕ್ತರ ಸಭೆಯ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ದೊಡ್ಡ ಮಟ್ಟದಲ್ಲಿ ಪಿತೂರಿ, ಷಡ್ಯಂತ್ರ ನಡೆದಿದೆ. ಕ್ಷೇತ್ರದ ಪಾವಿತ್ರö್ಯತೆ ಹಾಳುಗೆಡವುದರ ಜೊತೆಗೆ ಹೆಗ್ಗಡೆ ಕುಟುಂಬದ ಹೆಸರು ಕೆಡಿಸುವ ಪ್ರಯತ್ನ ನಡೆದಿದೆ ಎಂದು ಅವರು ದೂರಿದರು.
ರಾಷ್ಟçಮಟ್ಟದಲ್ಲಿ ಅಪಾರ ಖ್ಯಾತಿ ಗಳಿಸಿರುವ ಹೆಗ್ಗಡೆಯವರ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಆಪಾದನೆ ಮಾಡುತ್ತಿವೆ. ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ವ್ಯವಸ್ಥಿತ ಸಂಚು ನಡೆದಿದೆ. ಇದರ ವಿರುದ್ಧ ದನಿ ಎತ್ತಲು ಕಳಸದಲ್ಲಿ ೧೭ರ ಭಾನುವಾರ ಬೆಳಿಗ್ಗೆ ೧೦.೩೦ಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು. ಮೆರವಣಿಗೆ ನಂತರ ಕಳಸದ ಮಹಾವೀರ ಭವನದಲ್ಲಿ ಪ್ರತಿಭಟನಾ ಸಭೆ ನಡೆಸಲಾಗುತ್ತದೆ. ಅನೇಕ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಧರಣೇಂದ್ರ ಮಾಹಿತಿ ನೀಡಿದರು.
ಸರ್ವೋದಯ ತೀರ್ಥ ಸಮಿತಿ ಅಧ್ಯಕ್ಷ ಬ್ರಹ್ಮದೇವ ಮಾತನಾಡಿ ಬುಧವಾರ ಚಿಕ್ಕಮಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ೫೦೦ಕ್ಕೂ ಹೆಚ್ಚಿನ ಜನ ಭಾಗವಹಿಸುತ್ತೇವೆ.ಕಳಸದಲ್ಲಿ ೧೭ನೇ ತಾರಿಕಿಗೆ ಪ್ರತಿಭಟನೆ ಹಮ್ಮಿಕೊಂಡಿದ್ದು ಸುಮಾರು ೩೦೦೦ ಕ್ಕೂ ಹೆಚ್ಚಿನ ಜನರನ್ನು ಸೇರಿಸಿ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವವರಿಗೆ ತಕ್ಕದಾದ ಪ್ರತ್ಯುತ್ತರ ಕೊಡಲಿದ್ದೇವೆ ಎಂದು ಹೇಳಿದರು.
ಬಾಹುಬಲಿ ಬೆಟ್ಟದಲ್ಲಿ ಅಸ್ತಿಪಂಜರಕ್ಕಾಗಿ ಶೋಧನೆ ನಡೆಸಿದರೆ ಜೈನರ ಶ್ರದ್ಧಾಕೇಂದ್ರಕ್ಕೆ ಅಪಮಾನ ಆಗುತ್ತದೆ. ಈ ಪ್ರಯತ್ನ ನಡೆಸಿದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹರ್ಷ, ಧರ್ಮಪಾಲ್, ಕೀರ್ತಿ ಜೈನ್ ಎಚ್ಚರಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಆಶಾಲತಾ, ಸುರೇಶ್ ಜೇನುಗೂಡು, ಸುಜಯಾ ಸದಾನಂದ, ರಾಮಪ್ರಕಾಶ್, ಮಂಜುನಾಥ್, ಅರುಣ್, ಮುರುಳೀಧರ್, ಮಣಿಕಂಠ, ಉಷಾ ಭಾಗವಹಿಸಿದ್ದರು.