
ಕಳಸ ಲೈವ್ ವರದಿ
ಒಂದು ಆರೋಗ್ಯವಂತ ಸಮಾಜದ ಮೂಲಾಧಾರವೇ ತಾಯಿ ಮತ್ತು ಮಗುವಿನ ಆರೋಗ್ಯ.ಗರ್ಭಿಣಿ ಮಹಿಳೆಯರ ಆರೈಕೆ ಮತ್ತು ಮಕ್ಕಳ ಆರೋಗ್ಯವು ಕೇವಲ ಕುಟುಂಬಕ್ಕೆ ಮಾತ್ರವಲ್ಲ ಸಂಪೂರ್ಣ ರಾಷ್ಟçದ ಭವಿಷ್ಯಕ್ಕೆ ಮಹತ್ವವಾಗಿದೆ ಎಂದು ವೈದ್ಯ ವಿಕ್ರಮ್ ಪ್ರಭು ಹೇಳಿದರು.
ಕಳಸ ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ವತಿಯಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಗರ್ಭಿಣಿ ಮಹಿಳೆಯರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗರ್ಭಿಣಿ ಮಹಿಳೆಯರ ಆರೋಗ್ಯ ಗಭಾವಸ್ಥೆಯು ಒಂದು ಸಂತೋಷದ ಕಾಲವಾದರೂ ಇದು ಎಚ್ಚರಿಕೆಯ ಅಗತ್ಯವಿರುವ ಸಮಯವೂ ಹೌದು.ಆರೋಗ್ಯಕರ ಆಹಾರವು ತಾಯಿಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಜಿ ಮಹೇಂದ್ರ ಮಾತನಾಡಿ ಗರ್ಭಿಣಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡುವುದು ಕೇವಲ ವೈದ್ಯರ ಜವಾಬ್ದಾರಿಯಲ್ಲ,ಇದು ನಮ್ಮೆಲ್ಲರ ಕರ್ತವ್ಯವಾಗಿದೆ.ಸಮುದಾಯವಾಗಿ ನಾವು ಗರ್ಭಿಣಿಯರಿಗೆ ಬೆಂಬಲ ನೀಡಬೇಕು.ಆರೋಗ್ಯ ಜಾಗೃತಿಯನ್ನು ಮೂಡಿಸಬೇಕು ಮತ್ತು ಮಗುವೇ ನಾಳಿನ ಆರೋಗ್ಯವಂತ ರಾಷ್ಟçದ ಆಧಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ೧೮ ಗರ್ಭಿಣಿ ಮಹಿಳೆಯರಿಗೆ ಪ್ರೋಟಿನ್ ಕಿಟ್ ನೀಡಲಾಯಿತು.
ರೋಟರಿ ಕ್ಲಬ್ ಕಾರ್ಯದರ್ಶಿ ವಿಶಾಲ್ ಎನ್.ವಿ, ಸದಸ್ಯರಾದ ಪಿ.ಎ.ಕುಮಾರಸ್ವಾಮಿ, ಕಿರಣ್ ಶೆಟ್ಟಿ, ಪಣೀಶ್, ಸತೀಶ್,ಸಂದೀಪ್ ಇನ್ನರ್ ವೀಲ್ ಕ್ಲಬ್ ಶ್ರೀವಾಣಿ ಸುಗಮ್, ಸ್ಮಿತಾ ಮಹೇಂದ್ರ, ಶೃತಿ ಪಣೀಶ್ ಇತರರು ಇದ್ದರು.