
ಕಳಸ ಲೈವ್ ವರದಿ
ಕಳಸದ ಪ್ರವಾಸಿತಾಣವಾದ ಕ್ಯಾತನಮಕ್ಕಿ ಹೋಗುವ ಕಚ್ಚಾ ರಸ್ತೆಯಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಕ್ಯಾತನಮಕ್ಕಿ ಗುಡ್ಡ ಇದು ಪ್ರವಾಸಿಗರ ಸ್ವರ್ಗ ಇಲ್ಲಿಗೆ ನೂರಾರು ಪ್ರವಾಸಿಗರು ಬರುತ್ತಾರೆ.ಅತ್ಯಂತ ದುರ್ಗಮ ಹಾಗೂ ಹೊಂಡಗುAಡಿಗಳಿAದ ಕೂಡಿದ ಈ ರಸ್ತೆಯಲ್ಲಿ ಪ್ರಯಾಣವೇ ಒಂದು ಸಹಾಸವಾಗಿದ್ದು, ಕೇವಲ ಜೀಪ್ ಮತ್ತು ಪಿಕಪ್ ನಲ್ಲಿ ಮಾತ್ರ ಸಂಚಾರ ಮಾಡಬಹುದಾಗಿದೆ.
ಇಂತಹ ರಸ್ತೆಯಲ್ಲಿ ಗುಲ್ಬರ್ಗದ ಐವರು ಪ್ರವಾಸಿಗರು ಸ್ಥಳಿಯ ಜೀಪೊಂದರಲ್ಲಿ ಕ್ಯಾತನಮಕ್ಕಿಗೆ ಹೋಗಿದ್ದಾರೆ. ಹೋಗಿ ಬರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.ಅದೃಷ್ಟವಶಾತ್ ದೊಡ್ಡ ಅಪಾಯ ಸಂಭವಿಸದೆ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಕ್ಯಾತನಮಕ್ಕಿಗೆ ತಾತ್ಕಾಲಿಕ ವಾಹನ ಸಂಚಾರ ನಿಷೇಧ
ಕ್ಯಾತನಮಕ್ಕಿ ಹೋಗುವ ರಸ್ತೆಯಲ್ಲಿ ಜೀಪ್ ಪಲ್ಟಿಯಾದ ಬೆನ್ನಲ್ಲೇ ಗುಡ್ಡಕ್ಕೆ ಹೋಗುವ ವಾಹನ ಸಂಚಾರವನ್ನು ನಿಷೇದ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರೀಯೆ ನೀಡಿದ ಕೊಪ್ಪ ಡಿಎಫ್ಒ ಶಿವಶಂಕರಪ್ಪ ಮಳೆ ಬಂದು ರಸ್ತೆ ಕೆಸರಿನಿಂದಕೂಡಿದೆ. ಅಲ್ಲಿ ಜೀಪ್ ಒಂದು ಸ್ಕಿಡ್ ಆಗಿ ಪಲ್ಟಿಯಾಗಿದೆ. ಈ ಹಿನ್ನಲೆಯಲ್ಲಿ ಮಳೆ ಕಡಿಮೆ ಆಗುವವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇದ ಮಾಡಲಾಗಿದೆ.
ಟ್ರಕ್ಕಿಂಗ್ ಹೋಗುವವರಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.