
ಕಳಸ ಲೈವ್ ವರದಿ
ಕಳಸದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಸೌಹಾರ್ದ ಗಣೇಶೋತ್ಸವದ ಅಂತಿಮ ದಿನದ ವಿಸರ್ಜನಾ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರ ಸ್ಪರ್ಧೆ ನಡೆಯಲಿದೆ.
ಎರಡನೇ ವರ್ಷದ ಶ್ರೀ ಸೌಹಾರ್ದ ಗಣೇಶೋತ್ಸವವು ಕಳಸದ ಅರಮನೆಮಕ್ಕಿ ಮೈದಾನದಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 4ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.ಗಣೇಶೋತ್ಸವದ ಅಂತಿಮ ದಿನ ಸೆಪ್ಟಂಬರ್ 4ರಂದು ವಿಸರ್ಜನಾ ಮೆರವಣಿಗೆಯು ನಡೆಯಲಿದ್ದು, ಈ ಮೆರವಣಿಗೆಯಲ್ಲಿ ಹತ್ತು ಹಲವು ವಿಶೇಷ ಆಕರ್ಷಣೆಗಳೊಂದಿಗೆ ಟ್ಯಾಬ್ಲೋ ಸ್ಪರ್ಧೆಯು ನಡೆಯಲಿದೆ.
ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ 10000 ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 5000 ನಗದು ಮತ್ತು ಟ್ರೋಫಿ, ತೃತೀಯ ಬಹುಮಾನ 2500 ನಗದು ಮತ್ತು ಟ್ರೋಫಿಯನ್ನು ನೀಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಬಿ.ವಿ.ರವಿ ರೈ ತಿಳಿಸಿದ್ದಾರೆ.
ಆಸಕ್ತರು ಪದ್ಮ ಪ್ರಸಾದ್ ಜೈನ್: 9482162151, ಅಭಿಷೇಕ್: 9480021567, ಅಭಿ ನಾಯ್ಕ್ 8217886778 ಈ ನಂ ಸಂಪರ್ಕಿಸಿ