
ಕಳಸ ಲೈವ್ ವರದಿ
ಗೀತ ಗಾಯನ ಸಮರ್ಪಣೆ ಮತ್ತು ಆನ್ಲೈನ್ ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಬೋಧಿನಿ ವಿದ್ಯಾ ಕೇಂದ್ರದ ಪ್ರೌಢಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಗೂ ಭಕ್ತಿ ಗೀತೆಗಳು ಹಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ರಾಷ್ಟ್ರ ಜಾಗೃತಿ ಅಭಿಯಾಣದಿಂದ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದ್ದು, ಈ ಸ್ಪರ್ಧೆಯಲ್ಲಿ ರಾಜ್ಯದ ಸುಮಾರು 2500 ಶಾಲೆಗಳು ಹಾಗೂ 18,566 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕವನ್ನು ನೀಡಲಾಗಿದೆ. ಶಾಲೆಗೆ ಟ್ರೋಫಿ, ಫಲಕ, ಭಾರತ್ ಮಾತಾ ಫೋಟೋ ಹಾಗೂ ಪುಸ್ತಕವನ್ನು ನೀಡಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಆನಂದ್ ತಿಳಿಸಿದ್ದಾರೆ.