
ಕಳಸ ಲೈವ್ ವರದಿ
ಕಳಸದ ಕಲಾ-ಸಾಂಸ್ಕೃತಿಕ ಪ್ರೇಮಿಗಳಿಗೆ ಹೊಸ ಉತ್ಸಾಹವನ್ನು ತಂದಿರುವ “ಧ್ವನಿ” ಕಿರುಚಿತ್ರವು ಟೀಮ್ ಕಳಸದ ಸೃಜನಶೀಲ ಕಿರುಚಿತ್ರವಾಗಿದ್ದು, ಅಕ್ಟೋಬರ್ 1ರಂದು ಬಿಡುಗಡೆಯಾಗಲಿದೆ.
ಸಾಮಾಜಿಕ ಬದಲಾವಣೆ, ಮಾನವೀಯ ಮೌಲ್ಯಗಳು ಹಾಗೂ ಸ್ಥಳೀಯ ಪ್ರತಿಭೆಗಳ ಅನಾವರಣಕ್ಕೆ “ಧ್ವನಿ” ಹೊಸ ಮೆಟ್ಟಿಲು ಎರುತ್ತಿದೆ.
ಸ್ಥಳೀಯ ಪ್ರತಿಭೆಗಳ ಕಲೆ, ಸಂಗೀತ ಮತ್ತು ನಟನೆಯ ಸಾಮರ್ಥ್ಯವನ್ನು ತೋರ್ಪಡಿಸುತ್ತದೆ.
ಕಥೆ, ಚಿತ್ರಕಥೆ, ನಿರ್ದೇಶನ, ಚಿತ್ರೀಕರಣ, ಸಂಗೀತ — ಎಲ್ಲವೂ ಸ್ಥಳೀಯ ಯುವಕರ ಶ್ರಮದಿಂದ ಮೂಡಿಬಂದಿದೆ. ವಿಶೇಷವಾಗಿ, ಸ್ಥಳೀಯ ಕಲಾವಿದರು ಮತ್ತು ತಾಂತ್ರಿಕ ತಜ್ಞರು ತಮ್ಮದೇ ಆದ ಶೈಲಿಯಲ್ಲಿ ಕೆಲಸ ಮಾಡಿ ಈ ಕಿರುಚಿತ್ರವನ್ನು ಸೃಜನಶೀಲ ಕೃತಿಯನ್ನಾಗಿ ರೂಪಿಸಿದ್ದಾರೆ.
ಈ ಚಿತ್ರದಲ್ಲಿ ಕಥೆ, ಚಿತ್ರಕಥೆ, ನಿರ್ದೇಶನವನ್ನು ಭರತ್, ಚಿತ್ರೀಕರಣ ಗಣೇಶ್ ಮಾಡಿದ್ದಾರೆ. ಅನುಶ್ರೀ, ಪ್ರಕೃತಿ, ರಮ್ಯಾ, ರಕ್ಷಿತಾ, ಪೂರ್ಣಿಮ, ಸಚಿನ್,ಸುನೀಲ್, ರಂಜಿತ್, ಅರುಣ್, ಪವನ್, ಸಂತೋಷ್, ವಿನಯ್, ನಾಗರಾಜ್ ಅಭಿನಯ ಮಾಡಿದ್ದಾರೆ.