
ಕಳಸ ಲೈವ್ ವರದಿ
ಕಳಸ ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ೩೭ನೇ ವರ್ಷದ ದುರ್ಗಾ ಪೂಜಾ ಮಹೋತ್ಸವದ ಸಂದರ್ಭದಲ್ಲಿ ಮಂಗಳವಾರ ಬಾಗಿನ ಕೊಡುವ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಸಕಿ ನಯನ ಮೋಟಮ್ಮ ಅವರು ಆಗಮಿಸಿ ದೇವಿಯ ದರ್ಶನ ಪಡೆದರು.
ದುರ್ಗಾ ಪೂಜೆಗೆ ಬಂದಿದ್ದ ಭಕ್ತ ಮಹಿಳೆಯರಿಗೆ ಶಾಸಕಿ ನಯನ ಮೋಟಮ್ಮ ಅವರು ಬಾಗಿನಗಳನ್ನು ವಿತರಿಸಿದರು. ದುರ್ಗಾ ದೇವಿಯ ಆಶೀರ್ವಾದವು ಎಲ್ಲರಿಗೂ ಸಿಗಲೆಂದು ಹಾರೈಸಿದರು. ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾಗಿನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ನಯನ ಮೋಟಮ್ಮ ಅವರು, “ದುರ್ಗಾ ದೇವಿಯು ಶಕ್ತಿಯ ಸಾಕಾರ ರೂಪ. ಮಹಿಳೆಯರೇ ಸಮಾಜದ ನಿಜವಾದ ಶಕ್ತಿ. ದೇವಿಯ ಆಶೀರ್ವಾದದಿಂದ ಎಲ್ಲರ ಕುಟುಂಬಗಳಲ್ಲಿ ಸಮೃದ್ಧಿ, ಸಂತೋಷ ಮತ್ತು ಐಶ್ವರ್ಯ ಉಂಟಾಗಲಿ” ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಹೊರನಾಡಿನ ರಾಜಲಕ್ಷಿö್ಮÃ ಜೋಷಿ ಉದ್ಘಾಟಿಸಿದರು.