
ಕಳಸ ಲೈವ್ ವರದಿ
ಕಳಸದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಪೂಜಾ ಮಹೋತ್ಸವದಲ್ಲಿ ಶ್ರೀ ದುರ್ಗಾ ಮತೆಗೆ ಜಾತಿ-ಧರ್ಮ ಭೇದವಿಲ್ಲದೆ ಎಲ್ಲಾ ಧರ್ಮದವರು ಹಾಗೂ ಸಂಘ ಸಂಸ್ಥೆಗಳು ಹಸಿರು ಹೊರೆ ಕಾಣಿಕೆ ಸಮರ್ಪಿಸಿ ಜಾತಿ ಭೇದವಿಲ್ಲದೆ ಒಗ್ಗಟ್ಟಿನ ಸಂದೇಶವನ್ನು ಸಾರಿದರು.
ಸವಿತಾ ಸಮಾಜ ಕಳಸ ಡಾ. ರಾಜ್ ಕನ್ನಡ ಸಂಘ ಮತ್ತು ಕರವೇ(ಪ್ರವೀಣ್ ಶೆಟ್ಟಿ) ಬಣ, ಆಟೋ ಚಾಲಕರು ಮತ್ತು ಮಾಲಕರ ಸಂಘ ಕಳಸ, ವಿಶ್ವಹಿಂದೂ ಪರಿಷದ್ ಬಜರಂಗದಳ ಕಳಸ, ಒಕ್ಕಲಿಗರ ಸಮುದಾಯ ಕಳಸ, ನಲಿಕೆ ಸಂಘ ಕಳಸ, ಬಾಲಗಣಪತಿ ಸಮಿತಿ, ಕಲ್ಮಕ್ಕಿ, ಕಳಸ ಫ್ರೆಂಡ್ಸ್ ಮತ್ತು ಜೆಸಿಐ ಕಳಸ, ಜೀಪ್ ಚಾಲಕರು ಮತ್ತು ಮಾಲಿಕರ ಸಂಘ ಕಳಸ, ಗಣಪತಿ ಸಮಿತಿ ಗಂಗನಕೊಡಿಗೆ, ಮುಸ್ಲಿಂ ಬಾಂಧವರು ಸಂಸೆ ಭಕ್ತಿಪೂರ್ವಕ ಕಾಣಿಕೆ ಹಾಗೂ ಹಸಿರುಹೊರೆಗಳನ್ನು ಸಮರ್ಪಿಸಿ, ಮಹೋತ್ಸವದ ಭಕ್ತಿ ವೈಭವವನ್ನು ಮತ್ತಷ್ಟು ಹೆಚ್ಚಿಸಿತು.
ಭಕ್ತರು ಅಕ್ಕಿ, ತರಕಾರಿ, ಎಣ್ಣೆ, ಬೇಳೆ, ಕಾಳು, ಚಾಪುಡಿ, ಟೀ ಪುಡಿ, ಕಡ್ಲೆ, ಮೆಣಸು, ಅವುಲಕ್ಕಿ, ಬೆಲ್ಲ, ಸಕ್ಕೆ, ತುಪ್ಪ, ಹೂ, ಹಣ್ಣುಗಳು ಹಾಗೂ ವಿವಿಧ ಕೃಷಿ ಉತ್ಪನ್ನಗಳು ಸೇರಿದ್ದು, ಭಕ್ತಿ ಭಾವದ ಜೊತೆ ರೈತರು ಹಾಗೂ ಭಕ್ತರ ಸಮನ್ವಯದ ಸೊಗಸಾದ ಸಂಕೇತವಾಯಿತು.
ಹಸಿರುಹೊರೆ ಕಾಣಿಕೆಯ ಮೂಲಕ ದೊರೆತ ಧಾನ್ಯ, ಹಣ್ಣು, ಹೂವುಗಳು ದುರ್ಗಾ ಪೂಜೆಯ ಅಲಂಕಾರ, ಪ್ರಸಾದ ವಿತರಣಾ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆಗೆ ಬಳಸಲಾಗುತ್ತದೆ.
ಹೊರೆಕಾಣಿಕೆ ಸಮರ್ಪಿಸಿದ ಭಕ್ತರನ್ನು ಸಮಿತಿಯ ಸದಸ್ಯರು ಭಕ್ತಿ ಪೂರ್ವಕವಾಗಿ ಸ್ವಾಗತಿಸಿ ಹೊರೆಕಾಣಿಕೆಯನ್ನು ದೇವರ ಮುಂಭಾಗದಲ್ಲಿ ಇರಿಸಿ ಪೂಜೆ ಮಾಡಿ ದೇವರಿಗೆ ಸಲ್ಲಿಸಿದರು.ಬಂದAತ ಭಕ್ತರಿಗೆ ಪ್ರಸಾದವನ್ನು ನೀಡಲಾಯಿತು.
ಹಿಂದೂ, ಮಸ್ಲಿಂ, ಕ್ರೈಸ್ತರು ಪರಸ್ಪರ ಶುಭಾಶಯಗಳನ್ನು ಹಂಚಿಕೊAಡು ಸೌಹಾರ್ದತೆಯ ಸಂದೇಶ ನೀಡಿದರು. ಎಲ್ಲರ ಸಹಭಾಗಿತ್ವದಿಂದ ಕಳಸ ದುರ್ಗಾ ಪೂಜಾ ಮಹೋತ್ಸವ ಧಾರ್ಮಿಕ ಸೌಹಾರ್ದತೆಯ ಶ್ರೇಷ್ಠತೆಗೆ ಮಾದರಿಯಾಯಿತು.