
oplus_2097154

ಕಳಸ ಲೈವ್ ವರದಿ
ಕಳಸ ಗ್ರಾಮ ಪಂಚಾಯಿತಿಯ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿರುವ ನೂತನ ಮಾಂಸ ಮತ್ತು ಮೀನು ಮಾರುಕಟ್ಟೆ ಇದೀಗ ಸಾರ್ವಜನಿಕರ ಸೇವೆಗೆ ಸಜ್ಜಾಗಿದ್ದು ಇದು ಗ್ರಾಮಸ್ಥರಿಗೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನತೆಗೆ ಶುದ್ಧ, ಅಚ್ಚುಕಟ್ಟಾದ ಮತ್ತು ಸೌಕರ್ಯಪೂರ್ಣ ಮಾಂಸ ಮತ್ತು ಮೀನು
ಈ ಹಿಂದೆ ಕಳಸ ಪಟ್ಟಣದ ಕೇಂದ್ರ ಭಾಗದಲ್ಲಿ ಮೀನು, ಕೋಳಿ,ಕುರಿ ಮಾಂಸ, ಒಣ ಮೀನಿನ ಮಾರು ಕಟ್ಟೆ ಇತ್ತು.ಇದು ಪಟ್ಟಣದ ಹೃದಯ ಭಾಗದಲ್ಲಿ ಮತ್ತು ಸರಿಯಾದ ವ್ಯವಸ್ಥೆಗಳು ಇಲ್ಲದೆ ಇರುವುದರಿಂದ ಪಂಚಾಯಿತಿಗೆ ನಿರ್ವಹಣೆ ಮಾಡಲು ಸಾಕಷ್ಟು ಸಮಸ್ಯೆಗಳು ಆಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಪದೇ ಪದೇ ದೂರುಗಳು ಬರುತ್ತಿದ್ದವು.ಈ ಬಗ್ಗೆ ದಿಟ್ಟ ನಿರ್ಧಾರವನ್ನು ತೆಗೆದುಕೊಂಡ ಕಳಸ ಗ್ರಾಮ ಪಂಚಾಯಿತಿಯು ಪಟ್ಟಣದಿಂದ ಸ್ವಲ್ಪವೇ ದೂರದಲ್ಲಿರುವ ಕಳಸ ಸಂತೆ ಮಾರುಕಟ್ಟೆ ಬಳಿ ಪ್ರತ್ಯೇಕವಾಗಿ ಸುಸಜ್ಜಿತವಾದ ಮಾಂಸ ಮತ್ತು ಮೀನು ಮಾರುಕಟ್ಟೆಯನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದೆ.
ಈ ಮಾರುಕಟ್ಟೆಯಲ್ಲಿ 10 ಕೋಳಿ, 2 ಹಂದಿ, 1 ಒಣಮೀನು, 1 ಹಸಿ ಮೀನು, 1 ಕುರಿ ಮಾಂಸ, 1 ಕೋಲ್ಡ್ ಸ್ಟೋರೇಜ್ ಅಂಗಡಿಗಳನ್ನು ತೆರೆಯಲಾಗಿದೆ.ಅಲ್ಲದೆ ಪ್ರತ್ಯೇಕವಾದ ಕೋಳಿ ಸಂಗ್ರಹ ಕೊಠಡಿ ಜೊತೆಗೆ, 24 ಗಂಟೆಗಳ ಕಾಲ ನೀರು ಸರಭರಾಜು, ಟಾಯ್ಲೇಟ್, ಶುದ್ಧಕುಡಿಯುವ ನೀರಿನ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ.
ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಒತ್ತು
ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗಿದೆ. 24 ಗಂಟೆ ನೀರಿನ ಸರಬರಾಜು, ಸರಿಯಾದ ಒಳಚರಂಡಿ ವ್ಯವಸ್ಥೆ, ಇಂಗು ಗುಂಡಿ, ಪ್ರತ್ಯೇಕ ಶೌಚಾಲಯ ಸೌಕರ್ಯ ಮತ್ತು ಪ್ರತೀ ನಿತ್ಯ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಮಾಡಲಾಗಿದೆ.
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತಾಜಾ ಮಾಂಸ ಮತ್ತು ಮೀನು ಲಭ್ಯವಿದೆ. ದೇಶಿ ಮತ್ತು ಬ್ರಾಯ್ಲರ್ ಕೋಳಿ, ಆಡು-ಕುರಿ ಮಾಂಸ, ಮೊಟ್ಟೆಯಂತಹ ಉತ್ಪನ್ನಗಳು ಮಾರಾಟವಾಗುತ್ತವೆ.
ಇಂದು(30-09-2025)ನೂತನ ಮಾಂಸ ಮತ್ತು ಮೀನು ಮಾರುಕಟ್ಟೆ ಹಾಗೂ ಕಳಸ ಗ್ರಾಮ ಪಂಚಾಯಿತಿ ಸಭಾಂಗಣ ಉದ್ಘಾಟನೆ
ಮಾಂಸದ ಮಾರುಕಟ್ಟೆ ಜೊತೆಯಲ್ಲಿ ಕಳಸ ಗ್ರಾಮ ಪಂಚಾಯಿತಿಯು ಸಾರ್ವಜನಿಕರ ಸೌಲಭ್ಯಕ್ಕಾಗಿ ನಿರ್ಮಿಸಿರುವ ನೂತನ ಸಭಾಂಗಣವು ಉದ್ಘಾಟನೆಗೊಳ್ಳಲಿದೆ. ಜನರ ಬಹುಕಾಲದ ಕನಸಾಗಿದ್ದ ಸಭಾಂಗಣ ಈಗ ಸಿದ್ಧಗೊಂಡಿದ್ದು, ಉದ್ಘಾಟನಾ ಸಮಾರಂಭಕ್ಕಾಗಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.
ಸಭಾAಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಪಂಚಾಯಿತಿ ಸದಸ್ಯರು ಭಾಗವಹಿಸಲಿದ್ದಾರೆ. “ಈ ಸಭಾಂಗಣವು ಗ್ರಾಮಸ್ಥರಿಗೆ ಶಾಶ್ವತವಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ವೇದಿಕೆಯಾಗಿ ಸೇವೆ ಸಲ್ಲಿಸಲಿದೆ. ಸರ್ಕಾರದ ಅನುದಾನ ಮತ್ತು ಪಂಚಾಯಿತಿಯ ಸ್ವಂತ ಸಂಪನ್ಮೂಲಗಳಿAದ ಈ ಸಭಾಂಗಣ ನಿರ್ಮಾಣಗೊಂಡಿದೆ.
——————–
ಕೋಟ್: ಕವೀಶ್; ಕಳಸ ಗ್ರಾಮ ಪಂಚಾಯಿತಿ ಪಿಡಿಒ
ಕಳಸದಲ್ಲಿ ಈ ಹಿಂದೆ ಜನವಸತಿ ಪ್ರದೇಶದಲ್ಲಿ ಇದ್ದ ಮಾರುಕಟ್ಟೆಯಿಂದ ನಿರ್ವಹಣೆಯ ಜೊತೆಗೆ ಸಾಕಷ್ಟು ಸಮಸ್ಯೆಗಳು ಇದ್ದ ಕಾರಣ ಈಗ ಕಳಸ ಸಂತೆ ಮಾರುಕಟ್ಟೆ ಬಳಿ ಕಳಸದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಸುಸಜ್ಜಿತವಾದ ಮಾಂಸ ಮತ್ತು ಮೀನು ಮಾರುಕಟ್ಟೆಯನ್ನು ತೆರೆಯಲಾಗಿದೆ. ಇದರಿಂದ ವಾರ್ಷಿಕವಾಗಿ ಅಂದಾಜು 7 ಲಕ್ಷ 20 ಸಾವಿರ ಪಂಚಾಯಿತಿಗೆ ವರಮಾನ ಸಿಗಲಿದೆ.ಅಲ್ಲದೆ ಸುಮಾರು 50 ಜನರಿಗೆ ಉದ್ಯೋಗ ವಾಗಿದೆ. ಇಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.