
oplus_2

ಕಳಸ ಲೈವ್ ವರದಿ
ಕಳಸ ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ೩೭ನೇ ವರ್ಷದ ಶ್ರೀ ದುರ್ಗಾ ಪೂಜಾ ಮಹೋತ್ಸವದ ಒಂಬತ್ತನೇ ದಿನ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆದವು.
ಬೆಳಿಗ್ಗೆ ಪವಿತ್ರ ದುರ್ಗಾ ಹೋಮ ನಡೆಸಲಾಯಿತು. ಅನಂತರ ತ್ರಿಮೂರ್ತಿ ಪೂಜೆ, ವೃಷಭವಾಹಿನಿ ಪಾರಾಯಣ ಮತ್ತು ವಿಶೇಷ ಹೂವಿನ ಪೂಜೆಗಳು ವೈದಿಕ ವಿಧಿವಿಧಾನಗಳೊಂದಿಗೆ ನಡೆದವು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ಬೆಳಿಗ್ಗೆ ಶ್ರೀಮತಿ ರಾಜಲಕ್ಷ್ಮೀ ಬಿ. ಜೋಷಿ ಹೊರನಾಡು ಮತ್ತು ಸಂಗಡಿಗರಿAದ ಸೌಂದರ್ಯ ಲಹರಿ ಕಾರ್ಯಕ್ರಮವನ್ನು ಭಕ್ತಿರಸಭರಿತವಾಗಿ ಪ್ರಸ್ತುತಪಡಿಸಲಾಯಿತು. ಈ ಕಾರ್ಯಕ್ರಮವು ಭಕ್ತರಿಗೆ ಆಧ್ಯಾತ್ಮಿಕ ಅನುಭೂತಿಯನ್ನು ನೀಡಿತು.
ಈ ವರ್ಷ ನಾಡಿನ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿ, ಅವರ ಸಂಕಷ್ಟ ನಿವಾರಣೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಅನ್ನದಾತರಾದ ರೈತರಿಗೆ ಸಮೃದ್ಧಿ, ಉತ್ತಮ ಬೆಳೆ ಮತ್ತು ಸಮಸ್ಯೆಗಳಿಂದ ಮುಕ್ತಿ ದೊರೆಯಲೆಂದು ದೇವಿಯ ಪಾದಕ್ಕೆ ವಿನಂತಿ ಸಲ್ಲಿಸಲಾಯಿತು.
ಹೂವಿನ ಪೂಜೆಯ ಅಂಗವಾಗಿ ದುರ್ಗಾ ಮಂಟಪವನ್ನು ಹೂ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.ಬAದAತ ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.