
ಕಳಸ ಲೈವ್ ವರದಿ
ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ದೇಶ್ ಮತ್ತು ಆತನ ಸಹಚರರು ನಡೆಸಿದ ಅಮಾನುಷ ಹಲ್ಲೆ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಮನನೊಂದ ದಲಿತ ಆಟೋ ಚಾಲಕ ಯುವಕ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಮತ್ತು ಎಪಿಸಿಆರ್ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದು ಪೊಲೀಸ್ ದೌರ್ಜನ್ಯ ಮತ್ತು ಮೇಲ್ಜಾತಿ ಯುವಕರಿಂದ ಅಮಾನುಷ ಹಲ್ಲೆಗೊಳಗಾಗಿ ದಲಿತ ಆಟೋ ಚಾಲಕ ನಾಗೇಶ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಬಗ್ಗೆ
ನಾಗೇಶ್ ಸಾವಿಗೆ ನೇರ ಕಾರಣರಾದ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಶಿಕ್ಷೆಗೆ ಒಳಪಡಿಸಬೇಕು. ನಾಗೇಶನ ಪತ್ನಿ, ಮಗು, ತಾಯಿ, ತಂಗಿ ಮತ್ತು ಅಣ್ಣನಿಗೆ ಸರ್ಕಾರದಿಂದ ತಲಾ ರೂ. 50 ಲಕ್ಷಗಳ ಪರಿಹಾರವನ್ನು ತಕ್ಷಣ ಘೋಷಿಸಬೇಕು. ನಾಗೇಶನ ಪತ್ನಿ ನೇತ್ರ ಅವರಿಗೆ ಸರ್ಕಾರಿ ಉದ್ಯೋಗವನ್ನು ತಕ್ಷಣವೇ ಜಾರಿಗೊಳಿಸಬೇಕು. ನಾಗೇಶನ ಒಂದುವರೆ ತಿಂಗಳ ಮಗುವಿನ ವಿದ್ಯಾಭ್ಯಾಸ ಮತ್ತು ಭವಿಷ್ಯದ ಸಂಪೂರ್ಣ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಯೇ ನೇರವಾಗಿ ವಹಿಸಿಕೊಳ್ಳಬೇಕು. ಆರೋಪಿಗಳ ಆಸ್ತಿಯನ್ನು ಜಪ್ತಿ ಮಾಡಿ, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು.ನಾಗೇಶನ ಆಟೋ ಮತ್ತು ಸ್ಟೇ ಯಂತ್ರವನ್ನು ನ್ಯಾಯಾಲಯದಿಂದ ಬಿಡಿಸಿಕೊಂಡು ಪೊಲೀಸ್ ಇಲಾಖೆಯೇ ಅವರ ಕುಟುಂಬಕ್ಕೆ ತಲುಪಿಸಬೇಕು. ಹಾಗೂ ನಾಗೇಶನ ಮೊಬೈಲನ್ನು ಕುಟುಂಬಕ್ಕೆ ಮರಳಿ ನೀಡಬೇಕು.
ಸಂಬAಧಪಟ್ಟ ಇಲಾಖೆಗಳು ಈ ಪ್ರಕರಣಕ್ಕೆ ಸಂಬAಧಿಸಿದAತೆ ತ್ವರಿತ ಮತ್ತು ನಿಷ್ಪಕ್ಷಪಾತವಾಗಿ ವರ್ತಿಸಿ, ನಾಗೇಶ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಒಂದು ವೇಳೆ ಆರೋಪಿಗಳ ಬಂಧನ ಮತ್ತು ಪರಿಹಾರ ನೀಡುವಲ್ಲಿ ವಿಳಂಬವಾದರೆ, ದಸಂಸ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಮತ್ತು ಎಪಿಸಿಆರ್ ಜಿಲ್ಲಾ ಸಮಿತಿ ಉಗ್ರ ಹೋರಾಟಕ್ಕೆ ಕರೆ ನೀಡಲು ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾಗರೀಕ ಹಕ್ಕುಗಳ ರಕ್ಷಣಾ ಸಂಘದ ಜಿಲ್ಲಾ ಕಾರ್ಯದರ್ಶಿ ರವಿ ಲಿಂಗಪ್ಪ ನಂತೋರು, ದ.ಸಂ.ದ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಸದಸ್ಯೆ ಆಶಾ ಸಂತೋಷ್, ದ.ಸಂ.ದ ಅಂಬೇಡ್ಕರ್ ವಾದ ಜಿಲ್ಲಾ ಸಂಘಟನಾ ಸಂಚಾಲಕ ಸಂತೋಷ್, ನಾಗೇಶನ ತಂಗಿ ಕಮಲಾಕ್ಷಿ, ಅಣ್ಣ ಯೋಗೀಶ ಇದ್ದರು.