
ಕಳಸ ಲೈವ್ ವರದಿ
ಕರ್ನಾಟಕ ಜಾನಪದ ಪರಿಷತ್ತು ಕಳಸ ಘಟಕ ವತಿಯಿಂದ ಕಲಶೇಶ್ವರ ದೇವಸ್ಥಾನದಲ್ಲಿ ನಡೆಯುವ ಗೋಕುಲಾಷ್ಠಮಿಯ ಮೊಸರು ಕುಡಿಕೆ ಹಾಗೂ ಜಾರುಕಂಬ ಏರುವ ಸಂದರ್ಭದಲ್ಲಿ ಬಿದಿರಿನ ಪೆಟ್ಲ ಹೊಡೆಯುವ ಕಾರ್ಯಕ್ರಮವನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಿಷತ್ತು ಅಧ್ಯಕ್ಷ ರಜಿತ್ ಕೆಳಗೂರು ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಬಾಲ ಲೀಲೆಗಳಲ್ಲಿ ಈ ಬಿದಿರಿನ ಪೆಟ್ಲ ಉಲ್ಲೇಖ ಆಗುತ್ತದೆ. ಗೋವುಗಳನ್ನು ಕಾಯುವ ಸಂದರ್ಭದಲ್ಲಿ ಬಾಲ ಕೃಷ್ಣನಿಗೆ ಬಿದಿರಿನ ಪೆಟ್ಲವು ಅಚ್ಚುಮೆಚ್ಚಿನ ಆಟಿಕೆ ವಸ್ತುವಾಗಿದ್ದು, ಇದನ್ನು ಈಗಿನ ಕಾಲದ ಮದ್ದುಗುಂಡು ಪಟಾಕಿ, ತುಪಾಕೆ ಅಂಥಹ ಶಬ್ದ ಬರುವ ವಸ್ತುಗಳ ಮೂಲ ಪೆಟ್ಲ ಎನ್ನಲಾಗಿದೆ. ಗುಡ್ಡಗಳಲ್ಲಿ ಗೋವುಗಳನ್ನು ಕಾಯುವಾಗ ಅರಮರಲು ಕಾಯಿ, ಜುಮ್ಮನ ಕಾಯಿ, ಬುಗುರಿ ಕಾಯಿಯನ್ನು ಬಳಸಿ ಬಿದಿರಿನ ಚಿಕ್ಕ ರಂದ್ರದಲ್ಲಿ ಒಂದರ ಹಿಂದೆ ಒಂದನ್ನು ಸರಿಸಿದಾಗ ಶಬ್ದದ ಮುಖಾಂತರ ಹೊರಬಂದು ತನ್ನ ಪಥ ತಲುಪುತ್ತದೆ, ಇದು ಈಗಿನ ಬಂದೂಕಿನ ಮಾದರಿಯು ಹೌದು, ದ್ವಾಪರ ಯುಗದ ಈ ಆಟಿಕೆ ವಸ್ತುವನ್ನು ಈಗಿನ ಕಾಲದ ಯುವಕರಿಗೆ ಪರಿಚಯಿಸುವುದು, ಜೊತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಜಾರುಕಂಬ ಏರುವ ಸಂದರ್ಭದಲ್ಲಿ ಇದರ ಪ್ರಾತ್ಯಕ್ಷಿಕೆಯನ್ನು ತೋರ್ಪಡಿಸಿ ಹಳೆಯ ಜಾನಪದ ಉಳಿಸುವುದು ಕರ್ನಾಟಕ ಜಾನಪದ ಪರಿಷತ್ತಿನ ಉದ್ದೇಶ ಆಗಿರುತ್ತದೆ.ಈ ಸಂಪ್ರದಾಯ ಕಲಶೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿತ್ತು.ಕಾಲ ಕ್ರಮೇಣ ನಿಂತು ಹೋದ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕರ್ನಾಟಕ ಜಾನಪದ ಪರಿಷತ್ತು ನಡೆಸಿಕೊಂಡು ಬಂದು ಈಗಿನ ಯುವ ಪೀಳಿಗೆಗೆ ಪೆಟ್ಲ ಹೊಡೆಯುವುದನ್ನು ಪರಿಚಯಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾರುಕಂಬ ಏರುವಾಗ, ಮೊಸರುಕುಡಿಕೆ ನಡೆಯುವಾಗ ಒಬ್ಬರಿಗೊಬ್ಬರು ಪೆಟ್ಲ ಹೊಡೆದುಕೊಂಡು ಸಂಭ್ರಮಪಟ್ಟರು.
ಈ ಸಂದರ್ಭದಲ್ಲಿ ಪರಿಷತ್ತು ಸದಸ್ಯರಾದ ಪ್ರಶಾಂತ್, ಪೂರ್ಣಚಂದ್ರ ಹೆಬ್ಬಾರ್, ಹಣೇಶ್ ಕುಕ್ಕೋಡು, ಪೂರ್ಣೀಮಾ, ನಿಖಿತಾ, ಸುಚಿತಾ, ನಗೀನಾ, ಶ್ರೀಧರ್ ಭಟ್, ಶುಭ ಭಟ್ ಇತರರು ಇದ್ದರು.