
ಕಳಸ ಲೈವ್ ವರದಿ
ಇಲ್ಲಿಯ ಗಾಳಿಗಂಡಿ ಹೇರಡಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ಮೂರ್ತಿ ಜೆ.ಕೆ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
1999ರಲ್ಲಿ ಸಂಸೆ ಗ್ರಾಮ ಪಂಚಾಯಿತಿಯ ಕಳಕೋಡು ಶಾಲೆಯಲ್ಲಿ ತನ್ನ ಕರ್ತವ್ಯಕ್ಕೆ ನಿಯೋಜನೆಗೊಂಡು ಇಲ್ಲಿ 8 ವರ್ಷಗಳ ಸೇವೆಯನ್ನು ಸಲ್ಲಿಸಿ, 2007ರಿಂದ 2012ರವರೆಗೆ ಕಲ್ಮಕ್ಕಿ ಶಾಲೆಯಲ್ಲಿ 5 ವರ್ಷಗಳ ಸೇವೆ ಸಲ್ಲಿಸಿ, 2012ರಿಂದ 2016ರವರೆಗೆ ಮೂಡಿಗೆರೆ ತಾಲ್ಲೂಕು ಬಿಳ್ಳೂರು ಶಾಲೆಯಲ್ಲಿ ತನ್ನ ಕರ್ತವ್ಯ ಸಲ್ಲಿಸಿ, 2016ರಿಂದ 2019ರ ವರೆಗೆ ಕಡೂರು ತಾಲ್ಲೂಕಿನ ಬಿಸಲೆರೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ, 2019ರಿಂದ ಇಲ್ಲಿಯವರೆಗೆ ಕಳಸ ತಾಲ್ಲೂಕಿನ ಗಾಳಿಗಂಡಿಯ ಹೇರಡಿಕೆ ಶಾಲೆಯಲ್ಲಿ ಆರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಮುಚ್ಚುವ ಹಂತದಲ್ಲಿರುವ ಹೇರಡಿಕೆ ಶಾಲೆಯನ್ನು ವಿವಿಧ ಟ್ರಸ್ಟಗಳ ಸಹಕಾರವನ್ನು ಕೋರಿ 6 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಾಣ, 2 ಲಕ್ಷ ವೆಚ್ಚದಲ್ಲಿ ಶಾಲೆಗೆ ಮೂಲಭೂತ ಸೌಲಭ್ಯ, ಸ್ಥಳಿಯರ ಹಾಗೂ ಹಳೇ ವಿದ್ಯಾರ್ಥಿಗಳ ಸಹಕಾರದಿಂದ 2 ಲಕ್ಷ ವೆಚ್ಚದಲ್ಲಿ ಅಗತ್ಯತೆಗಳ ಪೂರೈಕೆ, ಮರಸಣಿಗೆ ಗ್ರಾ.ಪಂ ವತಿಯಿಂದ 4 ಲಕ್ಷ ವೆಚ್ಚದಲ್ಲಿ ಶಾಲಾ ಕಂಪೌAಡ್ ನಿರ್ಮಾಣ, 2 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣ, ತಾ.ಪಂ ಅನುದಾನದಲ್ಲಿ 8 ಲಕ್ಷ ವೆಚ್ಚದಲ್ಲಿ 2 ತರಗತಿ ಕೊಠಡಿಗಳು ಅಡುಗೆ ಕೋಣೆ ಜೊತೆಗೆ ಸ್ಟೋರ್ ರೂಂ ದುರಸ್ತಿ ಕಾರ್ಯ, ಸಮಾನ ಮನಸ್ಕ ಶಿಕ್ಷರ ಜೊತೆಗೂಡಿ ಶಾಲೆಗೆ ಆಕರ್ಷಕ ಅಲಂಕಾರದೊAದಿಗೆ ಬಣ್ಣ ಹಚ್ಚುವುದು, ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ, ಪ್ರತಿಭಾ ಕಾರಂಜಿ ಕಾರ್ಯಕ್ರಮ, ಪರಿಸರ ಸಂಘದ ಮೂಲಕ ಆಕರ್ಷಕ ಉದ್ಯಾನವನ ನಿರ್ಮಾಣ, ಶಾಲಾವರಣದಲ್ಲಿ 100ಕ್ಕೂ ಹೆಚ್ಚು ಗಿಡ-ಮರಗಳ ಪೋಷಣೆ, ಶಾಲಾ ಕೈತೋಟ ನಿರ್ಮಾಣ, ಮಕ್ಕಳಿಗೆ ವ್ಯವಹಾರದ ಅರಿವು ಮೂಡಿಸಲು ಚಿಣ್ಣರ ಸಂತೆ, ಉಳಿತಾಯದ ಅರಿವು ಮೂಡಿಸಲು ಶಾಲಾ ಬ್ಯಾಂಕಿAಗ್ ರಚನೆ ಈ ರೀತಿಯ ಅನೇಕ ಕಾರ್ಯಕ್ರಮ ಮತ್ತು ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಮುಖಾಂತರ ಮುಚ್ಚುವ ಹಂತದಲ್ಲಿದ ಶಾಲೆಯನ್ನು ತೆರೆಸಿ ಈಗ ಗ್ರಾಮದ ಮಕ್ಕಳು ಇದೇ ಶಾಳೆಯನ್ನು ಮೆಚ್ಚಿಕೊಂಡು ಶಾಲೆಗೆ ಬರುವಂತಾಗಿದೆ.
ಈ ಕಾರ್ಯಕ್ಕೆ ಮೆಚ್ಚುಗೆಯಾಗಿ ಕಳಸ ಹೋಬಳಿ ಮಟ್ಟದ ಅತ್ಯುತ್ಯಮ ಶಾಲೆ, ಮೂಡಿಗೆರೆ ತಾಲ್ಲೂಕು ಮಟ್ಟದ ಉತ್ತಮ ಶಾಲಾ ಪ್ರಶಸ್ತಿಯು ಲಭಿಸಿತ್ತು.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಜೆ.ಕೆ ಶ್ರೀನಿವಾಸ ಮೂರ್ತಿಗೆ 2025-26ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಲು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಯನ್ನು ಇದೇ ತಿಂಗಳ ಸೆ 9ರಂದು ರೈತ ಭವನ ಮೂಡಿಗೆರೆಯಲ್ಲಿ ನೀಡಲಾಗುತ್ತಿದೆ.