
ಕಳಸ ಲೈವ್ ವರದಿ
ಕಳಸದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿನ್ನಾಗಿ ಕೆಲಸ ನಿರ್ವಹಿಸುತ್ತಿರುವ ಯುವತಿಗೆ ಪಾಗಲ್ ಪ್ರೇಮಿಯೊರ್ವ ಚಾಕುವಿನಲ್ಲಿ ಇರಿದು ಪರಾರಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಯುವತಿಯು ಗುಡ್ಡೆತೋಟದರಾಗಿದ್ದು, ಚಾಕುವಿನಿಂದ ಇರಿದ ವ್ಯಕ್ತಿ ಜಯಪುರ ಮೂಲದ ಮೋಹನ್ ಎಂದು ಗುರುತಿಸಲಾಗಿದೆ.
ಇವರಿಬ್ಬರು ಪ್ರೀತಿಸುತ್ತಿದ್ದು, ಇತ್ತೀಚೆಗೆ ಈ ಪ್ರೀತಿಯು ಬ್ರೇಕಪ್ ಆಗಿತ್ತು ಎನ್ನಲಾಗುತ್ತಿದೆ.
ಯುವತಿಯು ಕಳಸದ ಖಾಸಾಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿನ್ನಾಗಿ ಕೆಲಸ ಮಾಡುವುದನ್ನು ತಿಳಿದುಕೊಂಡ ಯುವಕ ಶುಕ್ರವಾರ ಕಳಸಕ್ಕೆ ಬಂದಿದ್ದ ಯುವತಿಯು ಮಧ್ಯಾಹ್ನ ಸಮಯದಲ್ಲಿ ಆಸ್ಪತ್ರೆಯ ಮುಂಭಾಗದ ಮಹಾವೀರ ರಸ್ತೆಯ ನಡುವೆ ಇರುವ ಓಣಿಯಲ್ಲಿ ಹೋಗುತ್ತಿರುವಾಗ ಮೋಹನ್ ಏಕಾಏಕಿ ಯುವತಿಯ ಬೆನ್ನಿಗೆ ಹಾಗೂ ತಲೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಗಾಯಗೊಂಡ ಯುವತಿಯನ್ನು ಕಳಸ ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಳಸ ಪೊಲೀಸರು ಯುವಕನ ಪತ್ತೆಗೆ ಜಾಲ ಬೀಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.