
ಕಳಸ ಲೈವ್ ವರದಿ
ಜಿಲ್ಲೆಯ ಅತೀ ಉದ್ದದ ತೂಗು ಸೇತುವೆ ಎಂಬ ಹೆಗ್ಗಳಿಕೆಯ ವಶಿಷ್ಠಾಶ್ರಮದ ಬಳಿ ಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ಒಂದೆಡೆ ನಿರ್ವಹಣೆ ಇಲ್ಲದೆ ಮತ್ತೊಂದೆಡೆ ಪ್ರವಾಸಿಗರ ಹುಚ್ಚಾಟದಿಂದ ಅಪಾಯ ಅಂಚಿನಲ್ಲಿದೆ.
ಕಳಸ ತಾಲ್ಲೂಕಿನ ಮಾಗಲು ಗ್ರಾಮದ ಜನರಿಗೆ ಅನುಕೂಲ ಆಗುವ ದೃಷ್ಠಿಯಿಂದ 2011 ರಲ್ಲಿ ಶಿವಮೊಗ್ಗ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿAದ ಇಲ್ಲಿ ತೂಗು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.ಇದರಿಂದ ಆ ಭಾಗದ ನೂರಾರು ಗ್ರಾಮಸ್ಥರಿಗೆ ಪಟ್ಟಣದ ಸಂಪರ್ಕದ ಕೊಂಡಿಯಾಯಿತು.
ಆದರೆ ಈ ಸೇತುವೆ ಆದ ನಂತರ ಕೆಲವೇ ತಿಂಗಳು ಇಲ್ಲಿಯ ಗ್ರಾಮಸ್ಥರು ನೆಮ್ಮದಿಯಿಂದ ಆ ಸೇತುವೆಯಲ್ಲಿ ಓಡಾಡಿದ್ದಾರೆ.ಬಿಟ್ಟರೆ ಈಗ ಆ ಸೇತುವೇಯೇ ಗ್ರಾಮಸ್ಥರಿಗೆ ತೊಂದರೆಯಾಗಿ ಪರಿಣಮಿಸಿದೆ.
ಈ ಸೇತುವೆ ನಿರ್ಮಾಣವಾಗಿ 14 ವರ್ಷಗಳು ಸಂದರೂ ಕೂಡ ಈ ವರೆಗೂ ಈ ಸೇತುವೆಯ ನಿರ್ವಹಣೆಯನ್ನು ಮಾಡದೆ, ಶಿಥಿಲಾವಸ್ಥೆ ತಲುಪುವ ಅಂಚಿನಲ್ಲಿದೆ ಅಲ್ಲದೆ ಸೇತುವೆಗೆ ಹಾಕಿರುವ ಕಬ್ಬಿಣದ ರಾಡುಗಳು ತುಕ್ಕು ಹಿಡಿದು ಹೋಗುತ್ತಿವೆ.
ತೂಗು ಸೇತುವೆಯು ಸಂಪೂರ್ಣ ಕಬ್ಬಿಣದಿಂದಲೇ ತಯಾರಾಗಿದ್ದು, ಪ್ರತೀ 2 ವರ್ಷಗಳಿಗೆ ಒಮ್ಮೆ ಗ್ರೀಸ್, ಪೈಂಟ್ ಹೊಡೆಯುವುದು ಕಡ್ಡಾಯವಾಗಿದೆ. ಆದರೆ ಸೇತುವೆ ನಿರ್ಮಾಣವಾಗಿ 14 ವರ್ಷಗಳೆ ಕಳೆದುಹೋಗಿದ್ದರೂ ಸಹ ಇದುವರೆಗೆ ಒಮ್ಮೆಯೂ ಯಾವುದೇ ನಿರ್ವಹಣೆ ಮಾಡದೇ, ಸೇತುವೆಯ ಎರಡೂ ರೋಪ್ಗಳು ಸಡಿಲಗೊಂಡಿದ್ದು, ಗಾಳಿ ಮಳೆಗೆ ವಿಪರೀತ ಅನ್ನುವಷ್ಟು ತೂಗುತ್ತಿವೆ.ಇದರ ಮೇಲೆ ಸಂಚಾರ ಮಾಡುವವರು ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ.
ಇತ್ತೀಚಿನ ವರ್ಷಗಳಲ್ಲಿ ತೂಗು ಸೇತುವೆ ಪ್ರವಾಸೋದ್ಯಮದಲ್ಲಿ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿವೆ. ವಿಶೇಷವಾಗಿ ಪರ್ವತ ಪ್ರದೇಶಗಳು, ಜಲಪಾತಗಳ ಹತ್ತಿರ ಮತ್ತು ಸುಂದರ ಕಣಿವೆಗಳಲ್ಲಿ ನಿರ್ಮಿಸಲಾದ ತೂಗು ಸೇತುವೆಗಳು ಪ್ರವಾಸಿಗರಿಗೆ ಸಾಹಸ ಮತ್ತು ರೋಮಾಂಚನದ ಅನುಭವ ನೀಡುತ್ತವೆ. ಆದರೆ, ಕೆಲವೊಮ್ಮೆ ಈ ರೋಮಾಂಚನೆ ಹುಚ್ಚಾಟದ ಮಟ್ಟಕ್ಕೆ ತಲುಪುತ್ತಿದೆ.
ವಶಿಷ್ಠ ತೀರ್ಥ ತೂಗು ಸೇತುವೆಯು ಮಲೆನಾಡ ಹಸಿರು ಸಿರಿಯ ಮಧ್ಯೆ ಇರುವುದರಿಂದ ಸಹಜವಾಗಿಯೇ ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಈ ಸೇತುವೆಯನ್ನು ನೋಡಲೆಂದೆ ವಾರಾಂತ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ತೂಗು ಸೇತುವೆ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ಆದರೆ ಸಾಹಸವನ್ನು ಆನಂದಿಸಲು ಹೋಗಿ ಹಲವರು ಸೋಶಿಯಲ್ ಮೀಡಿಯಾ ಕ್ರೇಜ್ಗೆ ಒಳಗಾಗಿ ಅಪಾಯಕಾರಿ ಸ್ಟಂಟ್ಗಳನ್ನು ಮಾಡುವುದರಿಂದ ಸುರಕ್ಷತೆ ಪ್ರಶ್ನೆಯಾಗಿದೆ.ಈ ಸೇತುವೆಯ ಇಕ್ಕೆಲಗಳಲ್ಲಿ ಯಾವುದೇ ಜನವಸತಿ ಇಲ್ಲದ ಕಾರಣ ಪ್ರವಾಸಿಗರ ಮೋಜು ಮಸ್ತಿ, ಹುಡುಗ-ಹುಡುಗಿಯರ ಚೆಲ್ಲಾಟ, ಸೇತುವೆಯ ಮಧ್ಯದಲ್ಲಿ ನಿಂತು ಅಪಾಯಕಾರಿ ಸೆಲ್ಫಿ, ಜೋರಾಗಿ ಆಡಿಸುವುದು, ಓಡುವುದು, ಸಾಹಸ ಪ್ರದರ್ಶನಕ್ಕಾಗಿ ವಿಡಿಯೋ ಚಿತ್ರೀಕರಣ ಭಯ ಹುಟ್ಟಿಸುವ ರೀತಿಯಲ್ಲಿ ಕೂಗು-ಕಿರುಚು ಸೇತುವೆಯ ಮೇಲೆ ಬೇಕಾಬಿಟ್ಟಿ ವರ್ತನೆಯಿಂದ ನಿರ್ವಹಣೆ ಇಲ್ಲದೆ ಬಳಲಿರುವ ತೂಗು ಸೇತುವೆಗೆ ಏನಾದರೂ ಆದರೆ ಎಂಬ ತೀವ್ರ ಆತಂಕಗೊಳ್ಳುವAತೆ ಮಾಡಿದೆ.ಸೇತುವೆಯ ಸಾಮರ್ಥ್ಯ ಮತ್ತು ಸುರಕ್ಷತಾ ನಿಯಮಗಳ ಅರಿವಿಲ್ಲದ ಪ್ರವಾಸಿಗರು 100ರಿಂದ 200 ಜನರಷ್ಟು ಜನ ಒಂದೇ ಬಾರಿ ಸೇತುವೆಯ ಮೇಲೆ ನಿಂತು ಹುಚ್ಚಾಟ ಮೆರೆಯುತ್ತಿದ್ದಾರೆ.ಸಾಲದೆಂಬAತೆ ಸ್ಪೀಕರ್ಗಳನ್ನು ತಂದು ಹಾಡು ಹಾಕಿ ನೃತ್ಯಗಳನ್ನು ಮಾಡುತ್ತಾರೆ. ದಾಂಧಲೆ ಮಾಡುವ ಪ್ರವಾಸಿಗರನ್ನು ಯಾರೂ ಕೂಡ ನಿಯಂತ್ರಿಸದೆ ಇರುವುದು ವಿಷಾದಕರವಗಿದೆ.
ಕಳಸ ಪೇಟೆ ಸಂಪರ್ಕಿಸಲು ತೂಗು ಸೇತುವೆ ನಮಗೆ ಅನಿವಾರ್ಯವಾಗಿದೆ. ಮಳೆ, ಗಾಳಿ ಸಮಯದಲ್ಲಿ ಸೇತುವೆ ವಿಪರೀತ ತೂಗುತ್ತಾ ಶಬ್ಧ ಮಾಡುವುದರಿಂದ ಓಡಾಡಲು ಭಯವಾಗುತ್ತದೆ. ಒಂದೆಡೆ ಈ ಸೇತುವೆಯು ಶಿಥಿಲಗೊಳ್ಳುತ್ತಿದೆ ಮತ್ತೊಂದೆಡೆ ಸೇತುವೆಯ ಮೇಲೆ ಪ್ರವಾಸಿಗರ ಅನುಚಿತ ವರ್ತನೆ ಮಿತಿ ಮೀರಿದೆ, ಸೇತುವೆಯ ಮೇಲೆ ಪ್ರಾವಸಿಗರ ಮಹಿಳೆಯರು, ಮಕ್ಕಳು ಒಬ್ಬೊಬ್ಬರೆ ಸೇತುವೆ ಮೇಲೆ ಓಡಾಡಲು ಭಯವಾಗುತ್ತದೆ. ನಮಗೆ ಆ ಸೇತುವೆಯಲ್ಲಿ ನಡೆದಾಡಿಕೊಂಡು ಹೋಗಲು ಪ್ರವಾಸಿಗರು ಬಿಡುತ್ತಿಲ್ಲ. ಒಂದೊAದು ಬಾರಿ 200ಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಇದರ ಮೇಲೆ ನಿಂತು ಹುಚ್ಚಾಟ ಮೆರೆಯುತ್ತಾರೆ.ಸಂಜೆಯಾಗುತ್ತಿದ್ದAತೆ ಮಧ್ಯವನ್ನು ಸೇವಿಸುತ್ತಾ ಪಾರ್ಟಿಯನ್ನು ಮಾಡಿ ಹಾಡು ಹಾಕಿ ಕುಣಿಯುತ್ತಿರುತ್ತಾರೆ ಇದಕ್ಕೆ ಸಂಬAದಿಸಿದ ಇಲಾಖೆ ಸೂಕ್ತವಾದ ಒಂದು ನಿರ್ದಾರವನ್ನು ತೆಗೆದುಕೊಂಡು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.