
ಕಳಸ ಲೈವ್ ವರದಿ
ಇಂಟರ್ಯಾಕ್ಟ್ ಕ್ಲಬ್ ಎಂದರೆ ಕೇವಲ ಒಂದು ಸಂಘಟನೆಯಲ್ಲ, ಇದು ಅಧ್ಯಯನದ ಜೊತೆಗೆ ಸಮಾಜ ಸೇವೆಯನ್ನು ಕಲಿಯುವ ವೇದಿಕೆ ಎಂದು ರೋಟರಿ ಕ್ಲಬ್ ಸಹಾಯಕ ರಾಜ್ಯಪಾಲ ರಾಜಗೋಪಾಲ ಜೋಷಿ ಹೇಳಿದರು
ಬಸ್ರಿಕಟ್ಟೆಯ ಸದ್ಗುರು ವಿದ್ಯಾ ಮಂದಿರದಲ್ಲಿ ನಡೆದ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಕ್ಲಬ್ ಮೂಲಕ ವಿದ್ಯಾರ್ಥಿಗಳಿಗೆ ಸಮಾಜಸೇವೆ, ನಾಯಕತ್ವ ಮತ್ತು ಹೊಣೆಗಾರಿಕೆಯ ಮಹತ್ವ ತಿಳಿಯುತ್ತದೆ.ನಿಮ್ಮಲ್ಲಿ ಉತ್ಸಾಹ, ಹೊಸ ಆಲೋಚನೆ, ಹಾಗೂ ಸೇವಾ ಮನೋಭಾವವಿದೆ. ಅದನ್ನು ಬಳಸಿ ಶಾಲೆ, ಸಮುದಾಯ ಮತ್ತು ಪರಿಸರಕ್ಕೆ ಒಳ್ಳೆಯದನ್ನು ಮಾಡುವುದು ನಿಮ್ಮ ಕರ್ತವ್ಯ ಎಂದು ಹೇಳಿದರು
ಕಳಸ ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಜಿ.ಮಹೇಂದ್ರ ಮಾತನಾಡಿ
“ಸ್ವತಃಕ್ಕಿಂತ ಸೇವೆ ಶ್ರೇಷ್ಠ”. ಈ ಮೌಲ್ಯವನ್ನು ಮುಂದುವರಿಸುವ ಕಾರ್ಯದಲ್ಲಿ ಇಂಟರ್ಯಾಕ್ಟ್ ಕ್ಲಬ್ ಒಂದು ಮಹತ್ವದ ಸೇತುವೆಯಂತಾಗಿದೆ. ನಿಮ್ಮ ಚಿಕ್ಕಚಿಕ್ಕ ಹೆಜ್ಜೆಗಳು ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲವು. ಶಾಲೆಯ ಸ್ವಚ್ಛತೆ, ವೃಕ್ಷಾರೋಪಣ, ರಕ್ತದಾನ ಶಿಬಿರಗಳಿಗೆ ಸಹಾಯ, ಗ್ರಾಮೀಣ ಮಕ್ಕಳಿಗೆ ಶಿಕ್ಷಣದಲ್ಲಿ ಬೆಂಬಲ, ಇವುಗಳೆಲ್ಲ ನಿಮ್ಮ ಮೂಲಕ ಸಾಧ್ಯ. ಈ ಕೆಲಸಗಳು ಕೇವಲ ಸೇವೆಯಲ್ಲ, ನಿಮ್ಮ ವ್ಯಕ್ತಿತ್ವ ನಿರ್ಮಾಣಕ್ಕೂ ಸಹಾಯವಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಂಟರ್ಯಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಡಿ.ಜಿ.ಗಜೇಂದ್ರ ಪ್ರಸನ್ನ ಜೋಷಿ, ಉಪಾಧ್ಯಕ್ಷರಾಗಿ ದೇವಲಿಕಾ, ಕಾರ್ಯದರ್ಶಿಯಾಗಿ ಹಣಿ ಕೆ.ಎನ್, ಸಹ ಕಾರ್ಯದರ್ಶಿಯಾಗಿ ಜಿ.ತೇಜಸ್ಸ್, ನಿರ್ದೇಶಕರಾಗಿ ಪನ್ನಗ, ಪ್ರೀತಮ್, ಶಮಿತಾ ಹೆಬ್ಬಾರ್, ಸಾನ್ವಿ, ಭರತ್ ಗೌಡ, ಸಹನಾ, ಭೂಮಿಕಾ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೋಟರಿ ವಲಯ ಲೆಪ್ಟಿನೆಂಟ್ ಯೋಗೇಶ್, ಸದ್ಗುರು ವಿದ್ಯಾ ಸಮಿತಿ ಅಧ್ಯಕ್ಷ ಟಿ.ಪ್ರಕಾಶ್, ಕಾರ್ಯದರ್ಶಿ ಗೋಪಾಲಕೃಷ್ಣ, ಸದ್ಗುರು ವಿದ್ಯಾ ಮಂದಿರದ ಪ್ರಾಂಶುಪಾಲ ರಜನೀಶ್ ಹೊಳ್ಳ, ಕಳಸ ರೋಟರಿ ಕ್ಲಬ್ ಕಾರ್ಯದರ್ಶಿ ವಿಶಾಲ್ ಎನ್.ವಿ, ಆದೀಶ್, ಮಹಿಂಭಾAಬಿಕಾ ಇದ್ದರು.