
ಕಳಸ ಲೈವ್ ವರದಿ
37ನೇ ವರ್ಷದ ಕಳಸ ಸಾರ್ವಜನಿಕ ಶ್ರೀದುರ್ಗಾಪೂಜಾ ಮಹೋತ್ಸವ ಸೆ 22 ರಿಂದ ಅಕ್ಟೋಬರ್ 02ರವರೆಗೆ ಕಳಸ ಶ್ರೀ ದುರ್ಗಾ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಸೆ 22ರಂದು ಕಲಶೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ ಮತ್ತು ಗಿರಿಜಾಂಬಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಪ್ತಶತಿ ಪಾರಾಯಣ, ಬೆಳಿಗ್ಗೆ ಗಣಹೋಮ ನಂತರ ಶ್ರೀದುರ್ಗಾದೇವಿಯ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ರಾತ್ರಿ 7-30ರಿಂದ ಕಳಸ ಕಲ್ಲುಭಾವಿ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ ಹಳುವಳ್ಳಿ ಇವರಿಂದ ಮಹಿಷ ಮರ್ದಿನಿ ಯಕ್ಷಗಾನ.
ಸೆ 23 ರಂದು ರಾತ್ರಿ 7-5ರಿಂದ ಶಿವಂ ಕಲಾವಿದರು ಕಳಸ ಇವರಿಂದ ಸಂಗೀತ ರಸಮಂಜರಿ,ಸೆ 24ರಂದು ರಾತ್ರಿ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರು ಅರ್ಪಿಸುವ ಮಂದಾರ್ತಿ ಮಾದೇವಿ, ಸೆ 25ರಂದು ರಾತ್ರಿ 7-30ಯಿಂದ ದೇವದಾಸ್ ಕಾಪಿಕಾಡ್ ಚಾ ಪರ್ಕ ಕುಡ್ಲ ಇವರಿಂದ ಎನ್ನನೇ ಕಥೆ ಹಾಸ್ಯಮಯ ತುಳು ನಾಟಕ, ಸೆ 26ರಂದು ಕಲಾಕುಂಭ ಕುಳಾಯಿ ಮಂಗಳೂರು ಇವರಿಂದ ಪರಮಾತ್ಮೆ ಪಂಜುರ್ಲಿ ಪೌರಾಣಿಕ ಕನ್ನಡ ನಾಟಕ. ಸೆ 27ರಂದು ಬೆಳಿಗ್ಗೆ 10ರಿಂದ ಪುಂಡರೀಕ ಭಟ್ ಮತ್ತು ಸಂಗಡಿಗರಿಂದ ಕೀರ್ತನೆ ಮತ್ತು ಭಜನೆ. ರಾತ್ರಿ 7-30ರಿಂದ ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ ಕದಂಬ ನಾಟಕ. ಸೆ 28 ರಂದು ಮಧ್ಯಾಹ್ನ 12 ರಿಂದ ಶ್ರೀಮತಿ ಆಶ್ರೀತ ಸುಪ್ರಜ್ ಕಳಸ ಇವರಿಂದ ಸುಗಮ ಸಂಗೀತ, ಭಕ್ತಿಗೀತೆ. ರಾತ್ರಿ 7-30ರಿಂದ ಶ್ರೀ ಶಿವಂ ಮ್ಯೂಸಿಕಲ್ ಅರ್ಪಿಸುವ ಸಂಗೀತ ರಸಮಂಜರಿ. ಸೆ 29ರಂದು ರಾತ್ರಿ 7-30ರಿಂದ ಸಂಗೀತ ಕಲಾವೃಂದ ಅರ್ಪಿಸುವ ಕ್ರಿಷ್ ಮೆಲೋಡಿ ಬೀಟ್ಸ್ ಕಳಸ ಇವರಿಂದ ಭಾವಗೀತೆ, ಜನಪದ ಗೀತೆ, ಹಳೇ ಚಿತ್ರಗೀತೆಗಳ ಸುಮಧುರ ಗಾಯನ.
ಸೆ 30ರಂದು ದುರ್ಗಾ ಹೋಮ, ಹೂವಿನ ಪೂಜೆ, ಶ್ರೀಮತಿ ರಾಜಲಕ್ಷ್ಮಿ ಬಿ ಜೋಷಿ ಸಂಗಡಿಗರಿಂದ ಸೌಂದರ್ಯ ಲಹರಿ, ಮಧ್ಯಾಹ್ನ ಶಾಸಕಿ ನಯನ ಮೋಟಮ್ಮನವರಿಂದ ಭಕ್ತ ಮಹಿಳೆಯರಿಗೆ ಬಾಗಿನ ವಿತರಣಾ ಕಾರ್ಯಕ್ರಮ. ರಾತ್ರಿ ರಂಗಪೂಜೆ ನಂತರ ಅಭಿನಯ ಕಲಾವಿದರು ಉಡುಪಿ ಇವರಿಂದ ಕನ್ನಡ ನಾಟಕ ಶಾಂಭವಿ.
ಅಕ್ಟೋಬರ್ 1 ರಂದು ಆಯುಧ ಪೂಜೆ ರಾತ್ರಿ 7-30ರಿಂದ ಡ್ರೀಮ್ ಡ್ಯಾನ್ಸ್ ಅಕಾಡೆಮಿ ಸೊರಬ ಇವರಿಂದ ಆಕರ್ಷಕ ವಿವಿದ ನೃತ್ಯ ಕಾರ್ಯಕ್ರಮ. ಅಕ್ಟೋಬರ್ 2 ರಂದು ಬೆಳಿಗ್ಗೆ 11-30ರಿಂದ ಸ್ಟಾರ್ ಬೀಟ್ಸ್ ಮೆಲೋಡಿಸ್ ಆರ್ಕೆಸ್ಟ್ರಾ ಕಳಸ ಇವರಿಂದ ಸಂಗೀತ ರಸಮಂಜರಿ. ಮಧ್ಯಾಹ್ನ 3-ರಿಂದ ಕಳಸದ ರಾಜಬೀದಿಯಲ್ಲಿ ವಿಶೇಷ ಆಕರ್ಷಣೆಯೊಂದಿಗೆ ಶ್ರೀ ದೇವಿಯ ವೈಭಯುತ ಮೆರವಣಿಗೆಯೊಂದಿಗೆ ಶ್ರೀ ದೇವಿಯ ವಿಸರ್ಜನಾ ಮೆರವಣಿಗೆ ಕೋಟಿ ತೀರ್ಥದಲ್ಲಿ ತೆಪ್ಪೋತ್ಸವ ಆನಂತರ ಶ್ರೀದೇವಿಯ ವಿಗ್ರಹ ವಿಸರ್ಜನೆ.
ಮೆರವಣಿಗೆಯಲ್ಲಿ ಚಂಡೆ, ಹುಲಿಕುಣಿತ, ಕೀಲುಕುದುರೆ, ಗೊಂಬೆ ಕುಣಿತ, ನಾಸಿಕ್ ಡೋಲ್ ಮತ್ತು ವಿವಿಧ ವೇಷಭೂಷಣಗಳು ಮೆರವಣಿಗೆಯುದ್ದಕ್ಕೂ ಕಂಡು ಬರಲಿದೆ.