
oplus_2097154
ಕಳಸ ಲೈವ್ ವರದಿ
ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ದೇಶಕ್ಕಾಗಿ ತಲೆತಲಾಂತರದಿAದ ಬಳಕೆಯಾಗುತ್ತಿದ್ದ ಅರಮನೆಮಕ್ಕಿ ಮೈದಾನದ ಮೇಲೆ ಸರ್ಕಾರಿ ಕಟ್ಟಡ ಕಟ್ಟಲು ಹೊರಟಿರುವುದು ಸಹಜವಾಗಿಯೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ
ಅರಮನೆಮಕ್ಕಿ ಮೈದಾನವು ಸ್ಥಳೀಯರ ಜೀವನದ ಅವಿಭಾಜ್ಯ ಅಂಗವಾಗಿದ್ದು, ಈ ಮೈದಾನಕ್ಕೆ ಐತಿಹಾಸಿಕ ಹಿನ್ನಲೆಯೂ ಇದೆ. ಈ ಮೈದಾನದಲ್ಲಿ ಕಳಸ ಯುವಕ ಸಂಘದ ಕಟ್ಟಡ ಇದ್ದು, ಇದರ ಮುಂಭಾಗದಲ್ಲಿ ಶಾಶ್ವತವಾದ ಬೃಹತ್ ವೇದಿಕೆಯು ಇದೆ. ಇಲ್ಲಿ ಮಾರಿ ಹಬ್ಬ, ಗಣೇಶೋತ್ಸವ, ಜಾತ್ರಾ ಸಂದರ್ಭದಲ್ಲಿ ಮನೋರಂಜನಾ ಕಾರ್ಯಕ್ರಮಗಳು, ಯಕ್ಷಗಾನ, ನಾಟಕ, ಕ್ರೀಡೆ ಮುಂತಾದ ಕಾರ್ಯಕ್ರಮ ನಡೆಯುತ್ತಿರುವುದಲ್ಲದೆ, ಹಲವಾರು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ವೇದಿಕೆಯಾಗಿದೆ. ಅಲ್ಲದೆ ಊರಿಗೆ ಇರುವ ಏಕೈಕ ಸಾರ್ವಜನಿಕ ಮೈದಾನವಾಗಿದೆ.
ಸರ್ಕಾರಿ ಯೋಜನೆಗಳು ಮತ್ತು ಭೂಮಿ ಹಂಚಿಕೆ
ಸರ್ಕಾರದ ಆದೇಶದ ಪ್ರಕಾರ ಈ ಮೈದಾನದಲ್ಲಿ 2 ಗುಂಟೆ ಭೂಮಿಯನ್ನು ಉಪಖಜಾನೆ ಅಧಿಕಾರಿಗಳ ಕಚೇರಿ ಕಟ್ಟಡದ ನಿರ್ಮಾಣದ ಉದ್ದೇಶಕ್ಕಾಗಿ ಈ ಭೂಮಿಯನ್ನು ಕಾಯ್ದಿರಿಸಲಾಗಿದೆ. ಅಲ್ಲದೆ ಇದೇ ಭೂಮಿಯಲ್ಲಿ ನಾಡ ಕಚೇರಿ ರಾಜಸ್ವ ನಿರೀಕ್ಷಿಕರ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ವಸತಿ ಗೃಹ ನಿರ್ಮಾಣದ ಉದ್ದೇಶಕ್ಕಾಗಿ 16 ಗುಂಟೆ ಮಂಜೂರಾಗಿದೆ.
ಅರಮನೆಮಕ್ಕಿ ಮೈದಾನದಲ್ಲಿ ಒಟ್ಟು 2ಎಕರೆ 15ಗುಂಟೆ ಭೂಮಿ ಇದ್ದು, ಇದರಲ್ಲಿ ಈಗಾಗಲೇ ವಾಲ್ಮಿಕಿ ಸಭಾ ಭವನ, ಯುವಕ ಸಂಘ ಕಟ್ಟಡ, ವೇಧಿಕೆ ಇದೆ. ಅಲ್ಲದೆ ಅಕ್ಕ ಪಕ್ಕ ಒಂದಷ್ಟು ಭೂಮಿ ಒತ್ತುವರಿಯಾಗಿದೆ. ಇದರಲ್ಲಿ ಸರ್ಕಾರಿ ಉಪ ಖಜಾನೆ, ಗ್ರಾಮಲೆಕ್ಕಾಧಿಕಾರಿಗಳ ವಸತಿ ಗೃಹ, ರಸ್ತೆಗಳನ್ನು ಕಳೆದರೆ ಉಳಿಯೋದು ಕೇವಲ 10 ಗುಂಟೆ ಭೂಮಿ ಮಾತ್ರ.ಈ ಭೂಮಿಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಿಲ್ಲ.
ಸರ್ಕಾರದ ಈ ನಡೆಯನ್ನು ಸ್ಥಳೀಯ ನಾಗರಿಕರು ಮತ್ತು ಸಾಂಸ್ಕೃತಿಕ ಸಂಘಟನೆಗಳು ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತಿವೆ. ಇಲ್ಲಿ ಯಾವುದೇ ಸರ್ಕಾರಿ ಕಟ್ಟಡವನ್ನು ಕಟ್ಟದೆ “ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಆ ಮೈದಾನವು ಹೃದಯವಾಗಿದೆ,” ಇದನ್ನು ಸಾರ್ವಜನಿಕ ಬಳಕೆಗೆ ಈ ಹಿಂದೆ ಇದ್ದ ಹಾಗೆ ಅರಮನೆಮಕ್ಕೆ ಮೈದಾನವಾಗಿಯೇ ಉಳಿಯಬೇಕು ಎಂದು ಸಾರ್ವಜನಿಕರು ಹೇಳುತ್ತಾರೆ.
ಸ್ಥಳಿಯ ಸಮಸ್ಯೆಗಳನ್ನು ಅರಿತುಕೊಳ್ಳದ ಅಧಿಕಾರಿಗಳು
ಕಳಸದಲ್ಲಿ ಸಾಕಷ್ಟು ಕಂದಾಯ ಭೂಮಿ ಇದ್ದರೂ ಕೂಡ ಊರಿನ ಹಾಗೂ ಹೋಗುಗಳನ್ನು ಗಮನಿಸದೆ ಮತ್ತು ಈ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರದೆ ಸದಾ ಬಳಕೆಯಾಗುತ್ತಿದ್ದ ಅರಮನೆ ಮಕ್ಕಿ ಮೈದಾನದಲ್ಲಿ ಸರ್ಕಾರಿ ಕಟ್ಟಡವನ್ನು ಕಟ್ಟಲು ಭೂಮಿಯನ್ನು ಮಂಜೂರು ಮಾಡಿಸಿಕೊಂಡಿರುವುದು ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿದೆ. ಇದು ಇಲ್ಲಿಗೆ ಬರುವ ಅಧಿಕಾರಿಗಳು ಸ್ಥಳೀಯ ಸಮಸ್ಯೆಗಳನ್ನು ಅರಿತುಕೊಳ್ಳದೆ ಮಾಡುವ ಏಕಾಏಕಿ ನಿರ್ಧಾರವಾಗಿದೆ
ಇಂತಹ ಕಟ್ಟಡ ನಿರ್ಮಾಣದಿಂದ ಮುಂದೆ ಇಲ್ಲಿ ಸಾರ್ವಜನಿಕ ಬಳಕೆಗೆ ಯಾವುದೇ ಭೂಮಿಯೂ ಇಲ್ಲದಂತಾಗುತ್ತದೆ. ಇತಿಹಾಸ ಮತ್ತು ಪರಂಪರೆಯ ಹಿರಿಮೆ ಕಾಪಾಡುವ ಉದ್ದೇಶದಿಂದ ಸ್ಥಳೀಯರು ಪರ್ಯಾಯ ಭೂಮಿ ಹುಡುಕುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಸಂತೋಷ್ ಹಿನಾರಿ, ಕಳಸ ಗ್ರಾಮ ಪಂಚಾಯಿತಿ ಸದಸ್ಯರು
ಅರಮನೆಮಕ್ಕಿ ಮೈದಾನಲ್ಲಿ ಈ ಹಿಂದಿನಿAದಲು ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ, ಉತ್ಸವಗಳು ನಡೆದುಕೊಂಡು ಬಂದಿದೆ.ಇಲ್ಲಿ ಯಾವುದೇ ಸಾರ್ಕರಿ ಕಟ್ಟಡಗಳು ಆಗಬಾರದು. ಈ ಮೈದಾನ ರಾಷ್ಟಿçÃಯ ಹಬ್ಬಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅರಮನೆಮಕ್ಕಿ ಮೈದಾನವನ್ನು ಮೀಸಲಿಡುವಂತೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯವನ್ನು ತೆಗೆದುಕೊಂಡಿದ್ದೇವೆ.ಇದಕ್ಕೆ ಊರಿನ ಜನರ ಸಹಕಾರ ಅಗತ್ಯವಾಗಿದೆ.
ಬಿ.ವಿ.ರವಿ ರೈ: ಅಧ್ಯಕ್ಷರು ಸೌಹಾರ್ದ ಗಣೇಶೋತ್ಸವ ಸಮಿತಿ
ಕಳಸ ಅರಮನೆಮಕ್ಕಿ ಮೈದಾನವನ್ನು ಸಾಂಸ್ಕೃತಿಕ ಕಾರ್ಯಕ್ರಮದ ಉದ್ದೇಶಕ್ಕಾಗಿಯೇ ಮೀಸಲಿಡಬೇಕು.ಇದಕ್ಕಾಗಿ ಯಾವುದೇ ಹೋರಾಟಕ್ಕೂ ನಾವು ಸಿದ್ದರಿದ್ದೇವೆ.ಏಕಾಏಕಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರಿಗಳ ತಪ್ಪು ನಡೆಯಿಂದ ಈ ರೀತಿಯ ಗೊಂದಲಗಳಿಗೆ ಮತ್ತು ಊರಿನಲ್ಲಿ ಅನಾವಶ್ಯಕ ಸಮಸ್ಯೆಗಳು ನಡೆಯುತ್ತಿವೆ. ಇಲಾಖೆಗೆ ಕಟ್ಟಡ ಕಟ್ಟಲು ಬೇರೆ ಭೂಮಿಯನ್ನು ಬಳಸಿಕೊಳ್ಳಿ. ಅರಮನೆಮಕ್ಕಿ ಮೈದಾನದಲ್ಲಿ ಯಾವುದೇ ಸರ್ಕಾರಿ ಕಟ್ಟಡವನ್ನು ಕಟ್ಟಲು ಬಿಡುವುದಿಲ್ಲ.