
ಕಳಸ ಲೈವ್ ವರದಿ
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಜನ್ಮದಿನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ವತಿಯಿಂದ ಕಳಸದಲ್ಲಿ ಹಣ್ಣಿನ ಗಿಡ ನೆಡುವುದರ ಮೂಲಕ ಆಚರಿಸಲಾಯಿತು.
ಬುಧವಾರ ಮಧ್ಯಾಹ್ನ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ದೇವಸ್ಥಾನದ ವಠಾರದಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯಕ್ರಮವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಕಳಸ ಬಿಜೆಪಿ ಅಧ್ಯಕ್ಷ ಶ್ರೀಕಾಂತ್, ಮುಖಂಡರುಗಳಾದ ಎಂ.ಎ.ಶೇಷಗಿರಿ, ನಾಗಭೂಷಣ್, ನಾಗೇಶ್ ಭಟ್, ಸುಜಯ ಸದಾನಂದ, ಬಿ.ಕೆ.ಮಹೇಶ್, ಪ್ರಸಿದ್ದ ಜೈನ್, ಸುಂದರ ಶೆಟ್ಟಿ, ಬಾಲಕೃಷ್ಣ ಪ್ರಭು ಇತರರು ಇದ್ದರು.