
ಕಳಸ ಲೈವ್ ವರದಿ
ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಸೆ 22 ರಿಂದ ಅ 05ರ ವರೆಗೆ ಲೋಕ ಕಲ್ಯಾಣಾರ್ಥವಾಗಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶರನ್ನವರಾತ್ರಾ ಮಹೋತ್ಸವ, ಶ್ರೀಮನ್ ಮಹಾ ಚಂಡಿಕಾ ಹೋಮ,ಪಟ್ಟಾಭಿಷೇಕೋತ್ಸವ ಹಾಗೂ ಜೀವ-ಭಾವ ಕಾರ್ಯಕ್ರಮದಲ್ಲಿ ಶ್ರೀಮಾತಾ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕ್ಷೇತ್ರದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಸೆ. 22ರಿಂದ ಅಕ್ಟೋಬರ್ 5 ರವರೆಗೆ ಅನ್ನಪೂರ್ಣೇಶ್ವರಿಗೆ ವಿವಿಧ ಅಲಂಕಾರ ಸೇವೆ, ಹೋಮಗಳು ನಡೆಯಲಿದೆ. ಹಾಗೂ ಪ್ರತೀ ದಿನ ಸಪ್ತಶತಿ ಪಾರಾಯಣ, ನಾಲ್ಕು ವೇದಗಳ ಪಾರಾಯಣ, ಸುಂದರಕಾAಡ ಪಾರಾಯಣ, ಶ್ರೀ ದೇವೀ ಭಾಗವತಾ ಪಾರಾಯಣ, ಕುಂಕುಮಾರ್ಚನೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರತೀ ದಿನ ಬೆಳಿಗ್ಗೆ ಮತ್ತು ರಾತ್ರಿ ಹಾಡುಗಾರಿಕೆ, ಭರತನಾಟ್ಯ, ಕರ್ನಾಟಕ ಶಾಸ್ತಿçÃಯ ಸಂಗೀತ, ನೃತ್ಯ ಸಂಕೀರ್ತನೆ, ದೇವರ ನಾಮ, ನೃತ್ಯ ಸಮರ್ಪಣಂ, ಸ್ಯಾಕ್ಸೋಫೋನ್ ವಾದನ, ಗಾನ ಕೀರ್ತನೆ, ಭಕ್ತಿ ಭಾವ ಸಂಗೀತ, ಕೂಚಿಪುಡಿ, ಶ್ರೀ ಅನ್ನಪೂರ್ಣೇಶ್ವರೀ ದೇವಿಯ ಚರಿತಾಮೃತ ಪೌರಾಣಿಕ ನಾಟಕ, ಯಕ್ಷಗಾನ, ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಅಕ್ಟೋಬರ್ 4 ರಂದು ಅಭಿಷೇಕ ಸಹಿತ ಪೂಜೆ ಲೋಕ ಕಲ್ಯಾಣಾರ್ಥವಾಗಿ ಶ್ರೀಮನ್ ಮಹಾಚಂಡಿಕಾ ಹೋಮ. ಅಕ್ಟೋಬರ್ 5ರಂದು ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ಅಭಿಷೇಕ ಮತ್ತು ವಿಶೇಷ ಪೂಜೆ, ನವಗ್ರಹ ಹೋಮ, ಜೀವ-ಭಾವ ಯೋಜನೆ ಕಾರ್ಯಕ್ರಮದಲ್ಲಿ ಶ್ರೀ ಮಾತಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಅಂದು ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್ ಶ್ರೀವಿದ್ಯಾಪೀಠಂ-ಶ್ರೀಕ್ಷೇತ್ರ ಶಕಟಪುರಮ್ ಶ್ರೀಶ್ರೀಕೃಷ್ಣಾನಂದತೀರ್ಥಮಹಾಸ್ವಾಮಿಗಳು ದಿವ್ಯ ಉಪಸ್ಥಿತಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ.