ಕಳಸ ಲೈವ್ ವರದಿ
ಕಳಸ ತಾಲ್ಲೂಕು ಆಡಳಿತದ ವತಿಯಿಂದ ನಡೆಯುವ ಕಳಸ ತಾಲ್ಲೂಕು ಕನ್ನಡ ರಾಜ್ಯೋತ್ಸವದಲ್ಲಿ ಕರಟದ ಚಿಪ್ಪಿನ ವಿನ್ಯಾಸಕಾರರು ಪೂರ್ಣಚಂದ್ರ ಹಂದಿಗೋಡು ಹಾಗೂ ಮಹಮ್ಮದ್ ಷರೀಫ್ ಹಿರೇಬೈಲ್ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಿದೆ.
ಹಂದಿಗೋಡು ಪೂರ್ಣಚಂದ್ರ ಹೆಬ್ಬಾರ್ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಅಪರೂಪದ ಕಲೆಯಾದ ಹವ್ಯಾಸವಾಗಿ ಕರಟದ ಚಿಪ್ಪಿನಲ್ಲಿ ವಿವಿಧ ರೀತಿಯ ಆಕೃತಿಯನ್ನು ಮಾಡುವ ಮೂಲಕ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ಇವರ ಈ ಕಲೆಯನ್ನು ಗುರುತಿಸಿ ಕಳಸ ಲೈವ್ ಸೇರಿದಂತೆ ಹಲವಾರು ರಾಜ್ಯ ಮಟ್ಟದ ಪತ್ರಿಕೆಗಳು ವರದಿಯನ್ನು ಮಾಡಿ ಇಡೀ ರಾಜ್ಯಕ್ಕೆ ಇವರ ಕಲೆಯನ್ನು ಪರಿಚಯಿಸಿದೆ.ಇವರ ಕಲೆಗೆ ಕರ್ನಾಟಕ ಜಾನಪದ ಪರಿಷತ್ತು ಜಾನಪದ ಸಿರಿ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.ಇವರ ಸಾಹಿತ್ಯ ಸಂಸ್ಕೃತಿ ಹಾಗೂ ಕಲೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ.
ಮಹಮ್ಮದ್ ಷರೀಫ್ ಹಿರೇಬೈಲ್
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕು ಹಿರೇಬೈಲ್ ಕೋರೆ ನಿವಾಸಿಯಾಗಿದ್ದು, ಹಿರೇಬೈಲಿನ ಪ್ರತಿಷ್ಠಿತ ಸಂಸ್ಥೆಯೆAದೇ ಗುರುತಿಸಲ್ಪಟ್ಟ ನಾಗರೀಕ ಸೇವಾ ಸಮಿತಿ, ಹಿರೇಬೈಲ್ನ ಆಂಬುಲೆನ್ಸ್ ಚಾಲಕನಾಗಿ ನಿರಂತರ ಒಂದು ದಶಕದಿಂದ “ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಮಾನವೀಯ, ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಇಡಕಣಿ ಗ್ರಾಮ ಪಂಚಾಯ್ತಿ, ಕನ್ನಡರಾಜ್ ಸಂಘ, ಕಳಸ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಶಷನ್ ಕಳಸ, ಮನ್ವಂತರ ಬಳಗ ಕಳಸ ಹಾಗೂ ಅನೇಕ ಸಂಘ ಸಂಸ್ಥೆಗಳು ನಿಮ್ಮನ್ನು ಗೌರವಿಸಿದೆ.
ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಕಳಸ ತಾಲ್ಲೂಕು ಆಡಳಿತವು ಈ ರಾಜ್ಯೋತ್ಸವ ಪುರಸ್ಕಾರವನ್ನು ನೀಡಿ ಗೌರವಿಸಲಿದೆ.

